Sunday, January 19, 2025
ಸುದ್ದಿ

ಪರಿವರ್ತನಾ ಯಾತ್ರೆಯ ಪೂರ್ವಭಾವಿ ಸಭೆ | ಪುತ್ತೂರು ತಾಲ್ಲೂಕಿನಾದ್ಯಾಂತ ಬಿ.ಜೆ.ಪಿ. ಕಾರ್ಯಕರ್ತರನ್ನು ಸಂಘಟಿಸುತ್ತಿರುವ ಅಶೋಕ್ ರೈ.

ಪುತ್ತೂರು : ಬಿಜೆಪಿ ಪೆರ್ನೆ-ಬಿಳಿಯೂರು ಗ್ರಾಮ ಸಮಿತಿಯ ವತಿಯಿಂದ ಪರಿವರ್ತನಾ ಯಾತ್ರೆಯ ಪೂರ್ವಭಾವಿ ಸಭೆಯು ಕಡಂಬು ಶ್ರೀ ರಾಮ ಭಜನಾಮಂದಿರದಲ್ಲಿ ನಡೆಯಿತು.ಪರಿವರ್ತನಾ ಯಾತ್ರೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ವಿವಿಧ ಜವಾಬ್ದಾರಿಗಳನ್ನು ಹಂಚಲಾಯಿತು. ಗ್ರಾಮ ಗ್ರಾಮಗಲ್ಲಿ ಬಿ.ಜೆ.ಪಿ.ಯ ಕಾರ್ಯರ್ತರನ್ನು ಸಂಘಟಿಸಿ, ಈ ಬಾರಿಯ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ನಿಟ್ಟಿನಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಪುತ್ತೂರು ತಾಲ್ಲೂಕಿನ ಬಿ.ಜೆ.ಪಿ.ಯ ಮುಂದಾಳತ್ವ ವಹಿಸಿದ್ದಾರೆ.

ವೇದಿಕೆಯಲ್ಲಿ ಗ್ರಾಮಾಂತರ ಯುವಮೋರ್ಚಾ ಅಧ್ಯಕ್ಷ ಸುನಿಲ್ ದಡ್ಡು , ಪೆರ್ನೆ ಬಿಳಿಯೂರು ಬಿಜೆಪಿ ಗ್ರಾಮ ಸಮಿತಿಯ ಅಧ್ಯಕ್ಷ ಶ್ರೀಧರ ಗೌಡ,ತಾ.ಪಂ ಸದಸ್ಯ ರಘ ಮಲ್ಲಡ್ಕ,ಭಜನಾಮಂದಿರದ ಅಧ್ಯಕ್ಷ ನರಸಿಂಹ ನಾಯಕ್,ಗ್ರಾಮ ಸಮಿತಿಯ ಕಾರ್ಯದರ್ಶಿ ಶರಣ್ ನೊರೊನ್ಹ,ಗ್ರಾ.ಪಂ ಸದಸ್ಯರಾದ ನವೀನ್ ಪೂಜಾರಿ ಪದಬರಿ,ಲಲಿತಾ,ಹರಿಣಾಕ್ಷಿ,ಶಿವಪ್ಪ ನಾಯ್ಕ,ಸುಮತಿ,ಯಶೋದಾ,ಬೂತ್ ಪ್ರಮುಖರಾದ ವೆಂಕಪ್ಪ ನಾಯ್ಕ,ಮಹೇಶ್ ಬಿಳಿಯೂರು,ಪುಷ್ಪರಾಜ್ ಶೆಟ್ಟಿ,ಗೋಪಾಲ ಸಪಲ್ಯ,ವಸಂತ ಶೆಟ್ಟಿ,ಕೊರಗಪ್ಪ ಭಂಡಾರಿ,ಜಾರಪ್ಪ ಗೌಡ,ರಮೇಶ್ ನಾಯ್ಕ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response