ಧರ್ಮಸ್ಥಳ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜೈನ ಸಮಾಜದ ವತಿಯಿಂದ ಮಹಾ ಮಸ್ತಕಾಭಿಷೇಕ ಸಂದರ್ಭದಲ್ಲಿ ಹೊರೆ ಕಾಣಿಕೆ ಸಮರ್ಪಿಸಲಾಯಿತು.
ಧರ್ಮಸ್ಥಳದಲ್ಲಿ ಪ್ರವೇಶ ದ್ವಾರದಿಂದ ಭವ್ಯ ಮೆರವಣಿಗೆಯಲ್ಲಿ ಬಂದವರನ್ನು ಸ್ವಾಗತಿಸಿ ಜಮಾ ಉಗ್ರಾಣಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಹೊರೆಕಾಣಿಕೆಯನ್ನು ಅರ್ಪಿಸಿದರು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಎಮ್.ಎನ್. ರಾಜೇಂದ್ರ ಕುಮಾರ್, ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ಕೆ. ರಾಜವರ್ಮ ಬಳ್ಳಾಲ್, ಮಂಗಳೂರಿನ ಉದ್ಯಮಿ ಪುಷ್ಪರಾಜ ಜೈನ್, ನಿರಂಜನ ಬಾವಂತಬೆಟ್ಟು, ಅಂಡಾರು ಮಹಾವೀರ ಹೆಗ್ಡೆ, ಕೆ. ಮೋಹನ ಪಡಿವಾಳ್ ಕಾರ್ಕಳ, ಸುದರ್ಶನ ಹೆಗ್ಡೆ, ಕೆ. ಜಗತ್ಪಾಲ್, ಬಂಟ್ವಾಳದ ಕೆ ಸುದರ್ಶನ್ ಜೈನ್, ಸುನಿಲ್ ಕುಮಾರ್ ಬಜಗೋಳಿ, ಕೆ. ಶೋಭಾಕರ ಬಳ್ಳಾಲ್, ಮುನಿರಾಜ ಅಜ್ರಿ, ಜೈನ್ ಟ್ರಾವೆಲ್ಸ್ ಮಾಲಕ ರತ್ನಾಕರ ಜೈನ್ ಮೊದಲಾದವರು ಉಪಸ್ಥಿತರಿದ್ದರು.
ಜಮಾ ಉಗ್ರಾಣದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಮಾತನಾಡಿ ಮಸ್ತಾಕಾಭಿಷೇಕಕ್ಕೆ ಸರ್ವರೂ ನೀಡುತ್ತಿರುವ ಸಹಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಎಲ್ಲರೂ ಕುಟುಂಬ ಸಮೇತರಾಗಿ ಮಸ್ತಕಾಭಿಷೇಕಕ್ಕೆ ಬಂದು ಪುಣ್ಯ ಭಾಗಿಗಳಾಬೇಕೆಂದು ಆಹ್ವಾನಿಸಿದರು.
ಪ್ರೊ.ಎಸ್. ಪ್ರಭಾಕರ್, ಡಿ. ಸುರೇಂದ್ರ ಕುಮಾರ್, ಅನಿತಾ ಡಿ. ಸುರೇಂದ್ರ ಕುಮಾರ್, ಡಿ .ಹರ್ಷೇಂದ್ರ ಕುಮಾರ್, ಡಾ. ಬಿ .ಯಶೋವರ್ಮ, ಉಜಿರೆ, ಶ್ರೇಯಸ್ ಕುಮಾರ್ ಮತ್ತು ನಿಶ್ಚಲ್ ಕುಮಾರ್ ಉಪಸ್ಥಿತರಿದ್ದರು.