Monday, November 25, 2024
ಸುದ್ದಿ

‘ಯೋಚನೆ ಯಾಕೆ ಚೇಂಜ್ ಓಕೆ’ ಟ್ಯಾಗ್ ಲೈನ್ ಕಾರ್ಯಕ್ರಮ ಪ್ರಾರಂಭಿಸುತ್ತಿರುವ 92.7 ಬಿಗ್ ಎಫ್ಎಂ – ಕಹಳೆ ನ್ಯೂಸ್

ಬೆಂಗಳೂರು: ಭಾರತದ ಅತಿದೊಡ್ಡ ರೇಡಿಯೊ ಜಾಲವಾದ ಬಿಗ್ ಎಫ್ಎಂ ಸಂಪೂರ್ಣ ಪರಿಷ್ಕರಣೆ ಮತ್ತು ಧನಾತ್ಮಕ ಬದಲಾವಣೆಯನ್ನು ಕಾರ್ಯಕ್ರಮದಲ್ಲಿ ಅಳವಡಿಸಲು ನಿರ್ಧರಿಸಿದೆ. ಬಿಗ್ ಎಫ್ಎಂನ ಹೊಸ ಬದಲಾವಣೆಯ ಮೂಲಭೂತ ಅಂಶವೆಂದರೆ- ‘ಯೋಚನೆ ಯಾಕೆ, ಚೇಂಜ್ ಓಕೆ’. ಇದರ ಭಾಗವಾಗಿ ಚಾನೆಲ್ ‘ಫುಲ್ ಟೈಮ್ ಪಾಸ್ ’ ಹೆಸರಿನ ಹೊಸ ಪ್ರದರ್ಶನವೊಂದನ್ನು ಪ್ರಾರಂಭಿಸಿದೆ.

ಇದರ ಮೂಲಕ ಬೆಂಗಳೂರಿನ ರೇಡಿಯೊ ಉದ್ಯಮದ ನೀಲಿ ಕಣ್ಣಿನ ಹುಡುಗ, ಆರ್.ಜೆ. ಪ್ರದೀಪಾ ಎಫ್ ಎಂಗೆ ಮರಳುತ್ತಿದ್ದಾರೆ. ಸಂಗೀತ ಪ್ರೇಮಿಗಳ ಹೃದಯವನ್ನು ಮುಟ್ಟುವ ಹಾಡುಗಳೊಂದಿಗೆ, ಹಾಸ್ಯಭರಿತ ಸಂಭಾಷಣೆಗಳು ಈ ಕಾರ್ಯಕ್ರಮದಲ್ಲಿರಲಿವೆ. ಹಾಸ್ಯದ ಸಂಗತಿಗಳ ಹಂಚಿಕೆಯೊಂದಿಗೆ ಹಿತವಾದ ಮತ್ತು ಸಂಗೀತದೊಂದಿಗೆ ಆರ್.ಜೆ. ಪ್ರದೀಪಾ ಸಂಜೆ 5 ರಿಂದ 9ರವರೆಗಿನ ಕಾರ್ಯಕ್ರಮವನ್ನು ಆಯೋಜಿಸುತ್ತಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರೇಡಿಯೋದಿಂದಲೇ ತನ್ನ ವೃತ್ತಿ ಜೀವನ ಆರಂಭಿಸಿದ್ದ ಕನ್ನಡದ ಪ್ರಸಿದ್ಧ ನಟ ರಮೇಶ್ ಅರವಿಂದ್ ಅವರು ಬಿಗ್ ಎಫ್ ಎಂ ನಲ್ಲಿ ಆರ್.ಜೆ ಆಗಿ ಬೆಳಗಿನ ಕಾರ್ಯಕ್ರಮವನ್ನು ಹೋಸ್ಟ್ ಮಾಡಿದರು. ಅವರೊಂದಿಗೆ ನಟಿ ಪರುಲ್ ಯಾದವ್ ಕೂಡಾ ಕೈಜೋಡಿಸಿದರು. ನಟ –ನಿರ್ಮಾಪಕರ ತಂಡವು ಬಿಗ್ ಎಫ್ ಎಂ ಸ್ಟುಡಿಯೋಗೆ ಭೇಟಿ ನೀಡಿ ಹೊಸ ಪ್ರಯತ್ನಕ್ಕೆ ಶುಭ ಕೋರಿದ್ದರು ಹಾಗು ಅವರ ಮುಂದಿನ ಚಿತ್ರ ಬಟರ್ ಫ್ಲೈ ಬಗ್ಗೆ ಮಾತನಾಡಿದರು. ಈ ಚಿತ್ರ ಹಿಂದಿಯಲ್ಲಿ ಕಂಗನಾ ರಾನಟ್ ನಟಿಸಿದ ಕ್ವೀನ್ ನ ರಿಮೇಕ್.

ರೇಡಿಯೊಗೆ ಪುನರಾಗಮನದ ಬಗ್ಗೆ ಮಾತನಾಡಿದ ಆರ್ ಜೆ ಪ್ರದೀಪಾ, “ನಾನು ಸಂಪೂರ್ಣವಾಗಿ ಭರವಸೆ ಹೊಂದಿದ ಬಿಗ್ ಎಫ್ಎಂಗೆ ಮರಳಲು ನನಗೆ ಬಹಳ ಸಂತೋಷವಿದೆ. “ಫುಲ್ ಟೈಮ್ ಪಾಸ್” ಎಂಬುದು ಆಸಕ್ತಿದಾಯಕ ಪರಿಕಲ್ಪನೆಯಾಗಿದ್ದು, ಮುದ ನೀಡುವ ಸಂಗೀತದೊಂದಿಗೆ ವಿನೋದದ ಸಂಭಾಷಣೆಗಳು, ಕೇಳುಗರ ಒತ್ತಡ ನಿವಾರಿಸಲಿವೆ. ನಟ ರಮೇಶ್ ಮತ್ತು ನಟಿ ಪರುಲ್ ಅವರು ಅಮೂಲ್ಯ ಸಮಯವನ್ನು ನಮಗಾಗಿ ಮೀಸಲಿಟ್ಟಿದ್ದಕ್ಕೆ ನಾನು ಹೃದಯ ಪೂರ್ವಕ ಕೃತಜ್ಞತೆಯನ್ನು ಹೇಳಲು ಇಷ್ಟಪಡುತ್ತೇನೆ ಮತ್ತು ಅವರ ಎಲ್ಲ ಮುಂಬರುವ ಯೋಜನೆಗಳಿಗೆ ನಾನು ಶುಭ ಹಾರೈಸುತ್ತೇನೆ” ಎಂದರು.

ನಟ-ಚಲನಚಿತ್ರ ನಿರ್ಮಾಪಕ ರಮೇಶ್ ಅರವಿಂದ್, “ಬಿಗ್ ಎಫ್ಎಂ ಅದ್ಭುತವಾದ ಮತ್ತು ಶಕ್ತಿಯುತ ವೇದಿಕೆಯಾಗಿದೆ. ನನ್ನ ಹೃದಯದಲ್ಲಿ ಬಿಗ್ ಎಫ್.ಎಂಗೆ ವಿಶೇಷವಾದ ಸ್ಥಾನವಿದೆ. ಸೆಲೆಬ್ರಿಟಿ ಹೋಸ್ಟ್ ಆಗಿ ಇಂದು ಬೆಳಗ್ಗಿನ ಕಾರ್ಯಕ್ರಮದಲ್ಲಿ ನಮ್ಮ ಮುಂಬರುವ ಸಿನಿಮಾ ಬಟರ್ ಫ್ಲೈಯ ಕುರಿತಾದಂತೆ ಕೆಲವು ವಿಶೇಷ ಮಾಹಿತಿಗಳನ್ನು ಹಂಚಿಕೊಳ್ಳಲು ಅವಕಾಶ ನೀಡಿದ್ದಕ್ಕೆ ಸಂತೋಷವಿದ “ ಎಂದರು.

ಬಳಿಕ ಮಾತನಾಡಿದ ನಟಿ ಪರುಲ್ ಯಾದವ್, “ಒಂದು ಉತ್ತಮ ಕಾರ್ಯಕ್ಕಾಗಿ ಪರಸ್ಪರ ಸಹಕಾರ ನಿಡುವುದು ನಿಜಕ್ಕೂ ಸುಂದರವಾದ ಸಂಗತಿ. ನನಗಂತೂ ಸಂತೋಷ ದುಪ್ಪಟ್ಟಾಗಿದೆ. ಯಾಕೆಂದರೆ ನಾವು ನಮ್ಮ ಬಹುನಿರೀಕ್ಷೆಯ ಚಿತ್ರ ಬಟರ್ ಫ್ಲೈಯನ್ನು ತೆರೆ ಕಾಣಿಸಲು ಮುಂದಾಗುತ್ತಿದ್ದೇವೆ ಹಾಗೂ ಬಿಗ್ ಎಫ್’ಎಂ ತನ್ನ ಹೊಸ ಕಾರ್ಯಕ್ರಮವನ್ನೂ ಪ್ರಾರಂಭಿಸುತ್ತಿದೆ. ಆರ್.ಜೆ ಪ್ರದೀಪರ ಹೊಸ ಕಾರ್ಯಕ್ರಮವು ಜನರ ಮನಸ್ಸಿನಲ್ಲಿ ನೆಲೆ ನಿಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ” ಎಂದರು.

ಬಿಗ್ ಎಫ್ ಎಂ ಹೊಸ ರೂಪುರೇಷೆಗಳನ್ನು ಸಿದ್ಧಪಡಿಸಿದ್ದು ದಿನದ 24 ಗಂಟೆಯೂ ಕನ್ನಡದ ಕಾರ್ಯಕ್ರಮಗಳು ಬಿತ್ತರಗೊಳ್ಳಬೇಕು ಎಂಬ ಧ್ಯೇಯದೊಂದಿಗೆ ‘ಪ್ರತಿದಿನ ಕನ್ನಡ ಪ್ರತಿಕ್ಷಣ ಕನ್ನಡ’ ಎಂಬ ಯೋಜನೆ ರೂಪಿಸಿದೆ. ಈ ಮೂಲಕ ಕನ್ನಡದ ಅತ್ಯುತ್ತಮ ಹಾಡುಗಳನ್ನು ಪ್ರಸಾರ ಮಾಡುತ್ತಿದೆ. ವಿಭಿನ್ನ ಕಾರ್ಯಕ್ರಮಗಳಿಂದ ಚಾನೆಲ್ ಹೊಸ ಸ್ಥಾನಕ್ಕೇರಿದೆ.