ವಿಟ್ಲ ಪರ್ಥಂಪಾಡಿ(ಜಾಟಾಧಾರಿ) ದೈವದ ಮಹಿಮೆ ಪ್ರಯುಕ್ತ ಐತಿಹಾಸಿಕ ಧರ್ಮತ್ತಡ್ಕದ ಧರ್ಮದ ಕಟ್ಟೆಯಲ್ಲಿ ಬಾಡೂರು ಜಟಾಧಾರಿ ದೈವದ ಭಂಡಾರಕ್ಕೆ ತಂಬಿಲ ಸೇವೆ – ಕಹಳೆ ನ್ಯೂಸ್
ಬಾಡೂರು: 157 ವರುಷಗಳ ಹಿಂದೆ ಬಾಡೂರಿನಿಂದ ಶ್ರೀ ಜಟಾಧಾರಿ ದೈವದ ಭಂಡಾರ ವಿಟ್ಲಕ್ಕೆ ಹೋಗಿ ಅಲ್ಲಿ ಮಹಿಮೆ ನಡೆಯುವುದು ಹೇಳಿ ಕೇಳಿ ಕೆಲವು ಹಿರಿಯರಿಗೆ ತಿಳಿದಿರುವ ವಿಚಾರವಾಗಿರುತ್ತದೆ.
ಇದೀಗ ಅದೇ ಸಂಪ್ರದಾಯದ ಪ್ರಕಾರ ವಿಟ್ಲದಲ್ಲಿ ನೂತನವಾಗಿ ಜಟಾಧಾರಿ ಗುಡಿ ನಿರ್ಮಾಣಗೊಂಡು ಶ್ರೀ ಜಟಾಧಾರಿ (ಪಾರ್ತಂಪಾಡಿ)ದೈವದ ಮಹಿಮೆ ವಿಟ್ಲ ಮಹಿಮೆಗದ್ದೆಯಲ್ಲಿ ನಡೆಯಿತು.
ಇದರಂಗವಾಗಿ ಪೂರ್ವಾಚಾರದಲ್ಲಿ ನಡೆದು ಬಂದಂತೆ ಬಾಡೂರಿನಿಂದ ಜಟಾಧಾರಿ ದೈವದ ಸುಮಾರು 157 ವರುಷಗಳ ಹಿಂದೆ ಬಾಡೂರಿನಿಂದ ಶ್ರೀ ಜಟಾಧಾರಿ ದೈವದ ಭಂಡಾರ ವಿಟ್ಲಕ್ಕೆ ಹೋಗಿ ಅಲ್ಲಿ ಮಹಿಮೆ ನಡೆಯುವುದು ಹೇಳಿ ಕೇಳಿ ಕೆಲವು ಹಿರಿಯರಿಗೆ ತಿಳಿದಿರುವ ವಿಚಾರವಾಗಿರುತ್ತದೆ.
ಪೂರ್ವಾಚಾರದಲ್ಲಿ ನಡೆದು ಬಂದಂತೆ ಬಾಡೂರಿನಿಂದ ಜಟಾಧಾರಿ ದೈವದ ಭಂಡಾರವನ್ನು ಕುಡಾಲು – ಬಾಡೂರು ಎರಡು ಗ್ರಾಮಗಳ ಶ್ರದ್ಧಾಳುಗಳು ಸೇರಿ ಬಾಡೂರಿನಿಂದ ವಿಟ್ಲ ಅರಮನೆಯ ಅಧೀನದಲ್ಲಿರುವ ಮಹಿಮೆ ಗದ್ದೆಯಲ್ಲಿ ನಡೆದ ಜಟಾಧಾರಿ ಮಹಿಮೆಗೆ ಬಾಡೂರಿನಿಂದ ಬ್ರಹ್ಮಶ್ರೀ ಉಳಾಲು ಬೂಡು ಪ್ರಕಾಶ ಕಡಮಣ್ಣಾಯ ತಂತ್ರಿಗಳ ನೇತೃತ್ವದಲ್ಲಿ ಭಂಡಾರ ಹೊರಟು ಧರ್ಮತ್ತಡ್ಕದ ಧರ್ಮದ ಕಟ್ಟೆಯಲ್ಲಿ ಜಟಾಧಾರಿ ದೈವಕ್ಕೆ ತಂಬಿಲ ಸೇವೆ ನೆರವೇರಿಸಿ ಕೊಂಡೊಯ್ಯಲಾಯಿತು.
ಕುಡಾಲು – ಬಾಡೂರು ಎರಡು ಗ್ರಾಮಗಳ ಶ್ರದ್ಧಾಳುಗಳು ಸೇರಿ ಬಾಡೂರಿನಿಂದ ವಿಟ್ಲ ಅರಮನೆಯ ಅಧೀನದಲ್ಲಿರುವ ಮಹಿಮೆ ಗದ್ದೆಯಲ್ಲಿ ನಡೆದ ಜಟಾಧಾರಿ ಮಹಿಮೆಗೆ ಬಾಡೂರಿನಿಂದ ಬ್ರಹ್ಮಶ್ರೀ ಉಳಾಲು ಬೂಡು ಪ್ರಕಾಶ ಕಡಮಣ್ಣಾಯ ತಂತ್ರಿಗಳ ನೇತೃತ್ವದಲ್ಲಿ ಭಂಡಾರ ಹೊರಟು ಧರ್ಮತ್ತಡ್ಕದ ಧರ್ಮದ ಕಟ್ಟೆಯಲ್ಲಿ ಜಟಾಧಾರಿ ದೈವಕ್ಕೆ ತಂಬಿಲ ಸೇವೆ ನೆರವೇರಿಸಿ ಕೊಂಡೊಯ್ಯಲಾಯಿತು.
ಧರ್ಮತ್ತಡ್ಕ ಧರ್ಮದ ಕಟ್ಟೆಯಲ್ಲಿ ನೆರವೇರಿದ ತಂಬಿಲ ಸೇವೆಗೆ ಮೆಪೋಡು ಮನೆಯ ಕೃಷ ರಾವ್ ಮೆಪೋಡು ಸೇವಾಕರ್ತರಾಗಿದ್ದರು. ಬಾಡೂರು ಮನೆಯಿಂದ ವಿಟ್ಲ ಚಾವಡಿಗೆ ಜಟಾಧಾರಿ ಭಂಡಾರವನ್ನು ಕೊಂಡೊಯ್ಯುವ ಸಂದರ್ಭದಲ್ಲಿ ಬ್ರಹ್ಮಶ್ರೀ ಉಳಾಲು ಬೂಡು ಪ್ರಕಾಶ ಕಡಮಣ್ಣಾಯ ತಂತ್ರಿಗಳು, ವೇದಮೂರ್ತಿ ಮರುವಳ ಗೋವಿಂದ ಭಟ್, ವಿಟ್ಲ ಅರಸ ಮನೆತನದವರು, ಕಂಬಾರು ದುರ್ಗಾಪರಮೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಬಾಡೂರು ಯಜಮಾನ ಶ್ರೀ ಕುಂಞಣ್ಣ ಭಂಡಾರಿ, ಮೊಕ್ತೇಸರರಾದ ನೆರಿಯ ಹೆಗಡೆ ಲಕ್ಷ್ಮಿನಾರಾಯಣ ಭಟ್, ಕುಡಾಲು ಗುತ್ತು ದಿವಾಕರ ಶೆಟ್ಟಿ, ಕಂಬಾರು ಕ್ಷೇತ್ರದ ಸೇವಾ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಪ್ರದೀಪ್ ರಾವ್ ಮೆಪೋಡು, ಕಾರ್ಯದರ್ಶಿಗಳಾದ ಮರುವಳ ಕೃಷ್ಣ ಭಟ್ ಬಂದಿಯೋಡು ಹಾಗೂ ಊರ-ಪರವೂರ ಗಣ್ಯರು ಉಪಸ್ಥಿತರಿದ್ದರು.