ರಾಷ್ಟ್ರೀಯ ಜಂತು ಹುಳು ನಿರ್ಮೂಲನೆ ನಿಮಿತ್ತ ಜನಜಾಗೃತಿ ಮೂಡಿಸಿದ ಯರಗಟ್ಟಿ ಶಾಲಾ ವಿದ್ಯಾರ್ಥಿಗಳು – ಕಹಳೆ ನ್ಯೂಸ್
ಬಾಗಲಕೋಟ: ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಯರಗಟ್ಟಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಯರಗಟ್ಟಿಯಲ್ಲಿ ಇಂದು ರಾಷ್ಟ್ರೀಯ ಜಂತು ಹುಳು ನಿರ್ಮೂಲನೆ ನಿಮಿತ್ತ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕ ವೃಂದದವರು ಗ್ರಾಮದ ಓಣಿಗಳಲ್ಲಿ ಸಂಚರಿಸಿ “ಶೌಚಾಲಯ ಬಳಸಿ, ಜಂತು ಹುಳು ತೊಲಗಿಸಿ” , “ಧರಿಸಿರಿ ಧರಿಸಿರಿ ಸ್ವಚ್ಛ ಉಡುಪು ಧರಿಸಿರಿ” , ಪಾದರಕ್ಷೆ ಧರಿಸಿ ಜಂತು ಹುಳು ಓಡಿಸಿ” ಎಂಬ ಮುಂತಾದ ಘೋಷಣೆಗಳನ್ನು ಕೂಗುತ್ತಾ ಜನಜಾಗೃತಿ ಮೂಡಿಸಿದರು.
ಈ ಸಮಯದಲ್ಲಿ ಶಾಲೆಯ ಮುಖ್ಯ ಗುರುಗಳಾದ ಐ.ಡಿ.ನಧಾಪ್, ಬಿ.ಬಿ.ಲೋಕಾಪೂರ, ಜೆ. ಲಾಡಖಾನ್, ಎಸ್.ಡಿ.ಗುರಾಡಿ ಹಾಗೂ ಗುರುಮಾತೆಯರಾದ ಎಸ್.ಎಚ್.ರಾಮದುರ್ಗ, ಎಸ್.ಎಸ್.ಮಗದುಮ್, ಎಲ್.ಡಿ.ಬಾಣಕಾರ, ಎಸ್.ಎಮ್.ಮಠಪತಿ ಹಾಗೂ ಗ್ರಾಮಸ್ಥರಾದ ಶ್ರೀಶೈಲ ಕುದರಿ ಉಪಸ್ಥಿತರಿದ್ದರು.