ಮಂಗಳೂರು: ಕರಾವಳಿಯ ಪ್ರಸಿದ್ಧ ಪ್ರವಾಸಿ ಬೀಚ್‍ಗಳಲ್ಲಿ ಇತ್ತೀಚಿಗೆ ಹೆಚ್ಚು ಹೆಚ್ಚು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ ಸಸಿಹಿತ್ಲು ಬೀಚ್. ಮಂಗಳೂರಿನ ಹಳೆಯಂಗಡಿ ಸಮೀಪ ಇರುವ ಸಸಿ ಹಿತ್ಲು ಬೀಚ್ ಕಳೆದ ಬಾರಿ ಕರ್ನಾಟಕದಲ್ಲೇ ಮೊಟ್ಟ ಮೊದಲ ಬಾರಿ ಎಂಬಂತೆ ಸರ್ಫಿಂಗ್‍ನ್ನು ಆಯೋಜನೆ ಮಾಡಿ ಎಲ್ಲೆಡೆ ಸುದ್ದಿ ಮಾಡಿತ್ತು.
ಇದೀಗ ರಾಜ್ಯ ಸರ್ಕಾರವು ತನ್ನ ಬಜೆಟ್‍ನಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ಕೊಟ್ಟಿದ್ದು, ಕಡಲತೀರ ಅಭಿವೃದ್ಧಿಗಾಗಿ ಸುಮಾರು 7 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ.
ಪಣಂಬೂರು ಹಾಗೂ ಸಸಿಹಿತ್ಲು ಕಡಲತೀರದ ಅಭಿವೃದ್ಧಿಗಾಗಿ ಸುಮಾರು ಏಳು ಕೋಟಿ ರೂಪಾಯಿಯನ್ನು ಬಜೆಟ್ ನಲ್ಲಿ ಮೀಸಲಿಡಲಾಗಿದೆ.
ಇದರಿಂದ ಮುಂದಿನ ದಿನಗಳಲ್ಲಿ ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮವು ಮತ್ತಷ್ಟು ಬಲಪಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.