Sunday, January 19, 2025
ಸುದ್ದಿ

ಸಾಮಾಜಿಕ ಜಾಲತಾಣದಲ್ಲಿ ತುಳುನಾಡಿನ ದೈವ ಕೊರಗಜ್ಜನ ಅವಹೇಳನ | ದೈವ ಸನ್ನಿದಿಯಲ್ಲಿ ಕ್ಷಮೆಯಾಚಿಸಿದ ಮನೋಜ್.

ಮಂಗಳೂರು : ಕೆಲವು ದಿನಗಳ ಹಿಂದೆ ತುಳುನಾಡಿನ ಆರಾಧ್ಯ ದೈವ ಕೊರಗಜ್ಜನ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಮನೋಜ್ ಪಂಡಿತ್ ಎಂಬಾತ ಇದೀಗ ಕ್ಷಮಾಪಣೆ ಕೇಳಿದ್ದಾನೆ. ಕೊರಗಜ್ಜನನ್ನು ನಿಂದಿಸಿದ್ದ ಮನೋಜ್ ಪಂಡಿತ್ ಎಂಬಾತ ನಿನ್ನೆ ವಜ್ರದೇಹಿ ಶ್ರೀಗಳ ಸಾರತ್ಯದ ಹಿಂದೂ ಸಂರಕ್ಷಣಾ ಸಮಿತಿಯ ಸದಸ್ಯರ ಉಪಸ್ಥಿತಿಯಲ್ಲಿ ಶ್ರೀ ಕೊರಗಜ್ಜ ದೈವಸ್ಥಾನಕ್ಕೆ ಬಂದು ತಾನು ಮಾಡಿದ ತಪ್ಪು ತನಗೆ ಅರಿವಾಗಿದ್ದು, ಈ ಬಗ್ಗೆ ಕ್ಷಮೆ ಯಾಚಿಸಿದ್ದಾನೆ. ಕೊರಗಜ್ಜ ನಿಂದನೆ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಈ ಸಂದರ್ಭದಲ್ಲಿ ಹಿಂದೂ ಸಂರಕ್ಷಣಾ ಸಮಿತಿ ಮುಖಂಡರಾದ ಕೆ.ಆರ್. ಶೆಟ್ಟಿ ಹಿಂದೂ ದೈವದೇವರುಗಳ ನಿಂದನೆ ಮಾಡುವವರಿಗೆ ಬುದ್ದಿ ಹೇಳಿ, ಅವರ ಮನಪರಿವರ್ತನೆ ಮಾಡಬೇಕು ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response