ಬಂಟ್ವಾಳ ತಾಲೂಕು ಮೂಡು ಪಡುಕೋಡಿ ಗ್ರಾಮದ ಸೇವಾ ನಿವಾಸ ಉದಯ್ ಅವರ ಮಗಳು ದಿವ್ಯಶ್ರೀ 19 ರಂದು ಕಾಣೆಯಾಗಿದ್ದು ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ.
ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದಿವ್ಯಶ್ರೀ ಅವರ ತಾಯಿಯ ದೂರನ್ನು ನೀಡಿದರು. ದಿವ್ಯಶ್ರೀ ಮನೆ ಬಿಟ್ಟು ಹೋದಾಗ ಬರೆದ ಪತ್ರದಲ್ಲಿ “ನಾನು ಪ್ರೀತಿ ಹಿಂದೆ ಹೋಗುವುದಾಗಿ “ತಿಳಿಸಿದ್ದು ಇದರ ಆಧಾರದಲ್ಲಿ ಪುಂಜಾಲಕಟ್ಟೆ ಎಸ್.ಐ.ಸೌಮ್ಯ ಅವರು ವಿಚಾರಣೆ ನಡೆಸಿ ಆಕೆ ತಾನು ಪ್ರೀತಿಸಿದ ಹುಡುಗನ ಜೊತೆ ಬೆಂಗಳೂರಿನಲ್ಲಿ ಇರುವುದನ್ನು ಮಾಹಿತಿ ಕಲೆ ಹಾಕಿ ಪತ್ತೆ ಮಾಡಿ ಠಾಣೆಗೆ ಕರೆ ತಂದಿದ್ದಾರೆ.