ಸುಬ್ರಹ್ಮಣ್ಯ: ಆದಿಸುಬ್ರಹ್ಮಣ್ಯ ದರ್ಪಣತೀರ್ಥ ನದಿಯಲ್ಲಿ 45 ವರ್ಷ ಪ್ರಾಯದ ಗಂಡಸಿನ ಶವ ಪತ್ತೆಯಾಗಿದೆ. ಸುಬ್ರಹ್ಮಣ್ಯ ಪೊಲೀಸ್ ಅಧಿಕಾರಿ ಕರುಣಾಕರ ಹಾಗು ಸಿಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗಂಡಸಿನ ಶವ ಯಾರದು ಎಂಬುದು ಇನ್ನೂ ತಿಳಿದು ಬಂದಿಲ್ಲ. ಈ ಶವವನ್ನು ಸುಳ್ಯ ಶವಗಾರದಲ್ಲಿ ಇಡಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದರು.