ಸುಳ್ಯ: ರಂಗಸ್ಥಳದಲ್ಲಿ ಯಕ್ಷಲೋಕವನ್ನೇ ಮರು ಸೃಷ್ಟಿ ಸಿದ ಮಕ್ಕಳು, ಯಕ್ಷ ಪ್ರೇಮಿಗಳ ಮನಸೂರೆಗೊಂಡ ಮಕ್ಕಳ ಯಕ್ಷಗಾನ. ಇನ್ನೂ ಎರಡುದಿನ ಜರಗಲಿದೆ ಯಕ್ಷೋತ್ಸವ, ಸುಳ್ಯ ಚೆನ್ನಕೇಶವ ದೇವಸ್ಥಾನದ ಎದುರು, ಭುವನೇಶ್ವರಿ ಯಕ್ಷಗಾನ ಕಲಾಮಂಡಳಿವತಿಯಿಂದ ಮಕ್ಕಳ ಯಕ್ಷಗಾನ ಆಯೋಜಿಸಲಾಗಿದ್ದು, ಇದರ ಉದ್ಘಾಟನೆಯನ್ನು ಮಣಿಕ್ಕರ ಗೋಪಾಲಕೃಷ್ಣ ಶ್ಯಾನುಬಾಗ್ ಉದ್ಘಾಟಿಸಿದರು.
ದೇವಸ್ಥಾನ ದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ.ಹರಪ್ರಸಾದ್ ತುದಿಯಡ್ಕ ಅಧ್ಯಕ್ಷತೆ ವಹಿಸಿದ್ದರು, ಡಾ.ಪ್ರಭಾಕರ್ ಶಿಶಿಲ ಮುಖ್ಯ ಅತಿಥಿಯಾಗಿದ್ದರು.
ಮಂಡಳಿ ಸಂಚಾಲಕ ಕೋಡ್ಲ ಗಣಪತಿ ಭಟ್ ವೇದಿಕೆಯಲ್ಲಿದ್ದರು, ನಂತರ ಆರಂಭವಾದ ಮಕ್ಕಳ ಯಕ್ಷಗಾನ ಯಕ್ಷಪ್ರೇಮಿಗಳನ್ನು ದೇವಲೋಕಕ್ಕೆ ಕರೆದೊಯ್ಯಿತು.
ನಿರಂತರ ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮ , ಸುಳ್ಯದ ಯಕ್ಷ ಗುರು ಕೊಡ್ಲ ಗಣಪತಿ ಭಟ್ ರವರ 39 ನೇ ವರ್ಷದ ಪ್ರಯೋಗವಾಗಿದೆ.