ಧರ್ಮಸ್ಥಳ: ಧರ್ಮಸ್ಥಳ ಬಾಹುಬಲಿಗೆ 12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಮಹೋತ್ಸವದ ನಾಲ್ಕನೇ ಆವೃತ್ತಿ ಇಂದು ತೆರೆದುಕೊಳ್ಳಲಿದ್ದು, ದಶದಿನಗಳ ವಿರಾಟ್ ಉತ್ಸವ ಧರ್ಮಸ್ಥಳದಲ್ಲಿ ಅನಾವರಣಗೊಳ್ಳುತ್ತಿದೆ.
ಧವಳಕೀರ್ತಿಯ ಆಪಾದಮಸ್ತಕವನ್ನು ಮೀಯಿಸಿ, ತೋಯಿಸಲಿರುವ ಸಹಸ್ರಾರು ದ್ರವ್ಯ ಕಲಶಗಳು, ಸಾವಿರಾರು ಪುಣ್ಯಜಲ ಕಲಶಗಳು ಬಾಹುಬಲಿಯ ಅಭಿಷೇಕಕ್ಕೆ ಕಾದಿದೆ.
ಪರಮಪೂಜ್ಯ ಆಚಾರ್ಯ 108 ಶ್ರೀ ವರ್ಧಮಾನ ಸಾಗರ್ ಮುನಿ ಮಹಾರಾಜ್ ಮತ್ತು ಪರಮಪೂಜ್ಯ ಆಚಾರ್ಯ 108 ಶ್ರೀ ಪುಷ್ಪದಂತ ಮನಿ ಮಹಾರಾಜರ ಸಾರಥ್ಯದಲ್ಲಿ, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಮಹಾಮಜ್ಜನ ಶನಿವಾರ ಆರಂಭಗೊಳ್ಳುತ್ತಿವೆ.