ರಫೇಲ್ ಡೀಲ್‍ಗೆ ವಾಯುಸೇನೆ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ಮಾಧ್ಯಮವೊಂದರ ಲೇಖನ ಹಿಡಿದು ಮತ್ತೆ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿ ಹೇಳಿಕೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ.
ಕ್ಯಾಬಿನೆಟ್‍ನಲ್ಲಿ ಪ್ರಧಾನಿಗೆ ಮೊದಲ ಆದ್ಯತೆ ಹಾಗೇ ಅವರಿಗೆ ಎಲ್ಲ ಇಲಾಖೆಗಳ ಮೇಲುಸ್ತುವಾರಿ ಮಾಡುವ ಹಕ್ಕಿದೆ. ಇದೇ ನಿಯಮದ ಅನ್ವಯ ಪ್ರಧಾನಿ ಮೋದಿ ರಕ್ಷಣಾ ಇಲಾಖೆಯಲ್ಲಿನ ಬೆಳವಣಿಗೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಇದು ಹಸ್ತಕ್ಷೇಪ ಹೇಗಾಗುತ್ತದೆ. ಸಚಿವ ಸಂಪುಟದ ಪ್ರಮುಖ ವ್ಯಕ್ತಿ ಆಗಿರುವ ಪ್ರಧಾನಿ ತಮ್ಮ ಸಂವಿಧಾನಬದ್ಧವಾದ ಹಕ್ಕನ್ನು ಚಲಾಯಿಸಿದ್ದಾರೆ.
ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ಪ್ರಧಾನಿ ಸಚಿವಾಲಯದ ಕ್ರಮವನ್ನ ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್ ಸಮರ್ಥಿಸಿಕೊಂಡಿದ್ದಾರೆ.