Friday, September 20, 2024
ಸುದ್ದಿ

ಆಪರೇಷನ್ ಕಮಲಕ್ಕೆ ಪ್ರಧಾನಿ ಮೋದಿ, ಅಮಿತ್ ಷಾ ಸಾಥ್: ಖರ್ಗೆ ಆರೋಪ – ಕಹಳೆ ನ್ಯೂಸ್

ಆಪರೇಷನ್ ಕಮಲಕ್ಕೆ ಪ್ರಧಾನಿ ಮೋದಿ, ಅಮಿತ್ ಷಾ ಸಾಥ್ – ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆ ಆರೋಪ ಕರ್ನಾಟಕದಲ್ಲಿ ನಡೆಯುತ್ತಿರುವ ಆಪರೇಷನ್ ಕಮಲಕ್ಕೆ ಕೇವಲ ರಾಜ್ಯದವರು ಮಾತ್ರವಲ್ಲ ಪ್ರಧಾನಿ ಮೋದಿ, ಅಮಿತ್ ಷಾ ಕೂಡ ಸಾಥ್ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಬಜೆಟ್ ಮಂಡನೆಗೂ ಮುನ್ನ ಶುಕ್ರವಾರ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಆಡಿಯೋ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, ಆಪರೇಷನ್ ಕಮಲ ವಿಚಾರದಲ್ಲಿ ಆಡಿಯೋದಲ್ಲಿ ಮಾತನಾಡಿದ್ದು ಯಡಿಯೂರಪ್ಪ ಅಲ್ಲ, ಬೇರೆ ಯಾರೋ ಮಾತನಾಡಿದ್ದಾರೆ. ನಾನು ಸರಿಯಾಗ ತಿಳಿಯದೇ ಇವರೇ ಎಂದು ಹೇಗೆ ಹೇಳಲಿ, ಎಂದಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದ್ರೆ ಇದೀಗ, ಮೋದಿ, ಅಮಿತ್ ಷಾ ಏನೇ ಮಾಡಿದರೂ ಸರ್ಕಾರವನ್ನು ಕೆಡವಲು ಸಾಧ್ಯವಿಲ್ಲ. ಆಡಿಯೋ ಕುರಿತು ತನಿಖೆ ಆಗಬೇಕು. ಮುಂದೆ ಯಾರು ಇಂತಹ ತಪ್ಪು ದಾರಿಗೆ ಇಳಿಯಲು ಧೈರ್ಯ ಮಾಡುವುದಿಲ್ಲ. ಸ್ಪೀಕರ್ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ ಎಂದು ಹೇಳಿದರು.

ಜಾಹೀರಾತು

ಚುನಾವಣೆ ಮುಂಚೆ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ರಚಿಸಿ ಚುನಾವಣೆಗೆ ಹೋಗುವುದಕ್ಕೆ ಬಿಜೆಪಿ ಯತ್ನಿಸುತ್ತಿದೆ. ಪ್ರಜಾಪ್ರಭುತ್ವದಲ್ಲಿ ಚುನಾಯಿತ ಸರ್ಕಾರವನ್ನು ತೆಗೆದುಹಾಕಿ ನಿಮ್ಮ ಸರ್ಕಾರವನ್ನು ತರುವ ಹಳೆ ಚಾಳಿ ಬಿಟ್ಟಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.