Thursday, September 19, 2024
ರಾಜಕೀಯಸುದ್ದಿ

ಪ್ರತಿಪಕ್ಷ ನಿಂದನೆಗಳ ಒಲಿಂಪಿಕ್ಸ್‍ನಲ್ಲಿ ಭಾಗಿಯಾಗಿದ್ದಾರೆ; ಮೋದಿ – ಕಹಳೆ ನ್ಯೂಸ್

“ಮಹಾಕಲಬೆರಕೆ ಪಕ್ಷಗಳ ಪ್ರಮುಖ ಕೆಲಸವೇ ನನ್ನನ್ನು ನಿಂದಿಸುವುದು. ನನ್ನ ವಿರುದ್ಧ ಟೀಕೆಗಳ ಮಳೆಯಾಗುತ್ತಿರುವುದನ್ನು ನೋಡಿದರೆ, ಅವರೆಲ್ಲರೂ ನಿಂದನೆಗಳ ಒಲಿಂಪಿಕ್ಸ್‍ನಲ್ಲಿ ಭಾಗಿಯಾಗಿದ್ದಾರೇನೋ ಎಂಬಂತೆ ಭಾಸವಾಗುತ್ತಿದೆ.’ ಹೀಗೆಂದು ಪ್ರತಿಪಕ್ಷಗಳ ಮಹಾಮೈತ್ರಿ ವಿರುದ್ಧ ಪ್ರಧಾನಿ ಮೋದಿ ಕಿಡಿಕಾರಿದ್ದಾರೆ.

ತ್ರಿಪುರದಲ್ಲಿ ಶನಿವಾರ ನಡೆಸಿದ ರ್ಯಾಲಿಯಲ್ಲಿ ಮಹಾಮೈತ್ರಿಯನ್ನು ಮಹಾಕಲಬೆರಕೆ ಎಂದು ಪುನರುಚ್ಚರಿಸಿದ ಮೋದಿ, ಎಷ್ಟು ಸಾಧ್ಯವೋ ಅಷ್ಟು ಟೀಕಿಸುವುದು ಪ್ರತಿಪಕ್ಷಗಳ ಒಂದೇ ಕೆಲಸ. ಜನರಿಗೆ ಸುಳ್ಳು ಹೇಳುವುದರಿಂದ ಸಿಗುವ ಫಲಿತಾಂಶವೇನು ಎಂಬುವುದು ಲೋಕಸಭೆ ಚುನಾವಣೆ ಬಳಿಕ ಗೊತ್ತಾಗುತ್ತದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು