Sunday, January 19, 2025
ರಾಜಕೀಯಸುದ್ದಿ

ಎಂಎಲ್ಸಿ ಮಾಡಲು ಹೆಚ್‍ಡಿಕೆ 25ಕೋಟಿ ಕೇಳಿದ್ದರು; ಹೊಸ ಬಾಂಬ್ ಸಿಡಿಸಿದ ವಿಜುಗೌಡ ಪಾಟೀಲ – ಕಹಳೆ ನ್ಯೂಸ್

ವಿಜಯಪುರ: ಕಳೆದ 2004ರಲ್ಲಿ ನನ್ನನ್ನು ಎಂ ಎಲ್ ಸಿ ಮಾಡಲು 25 ಕೋಟಿ ರೂ. ನೀಡಬೇಕೆಂದು ಅಂತ ಸಿಎಂ ಕುಮಾರಸ್ವಾಮಿ ಅವರು ಕೇಳಿದ್ದರು ಎಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಜೆಡಿಎಸ್ ಪಕ್ಷದಲ್ಲಿದ್ದಾಗ ವಿಧಾನಸಭಾ ಚುನಾವಣಾ ವೇಳೆ ಕುಮಾರಸ್ವಾಮಿ ಅವರು ನನ್ನ ಪರ ಪ್ರಚಾರಕ್ಕೆ ಬರಲಿಲ್ಲ. ನಾನು 2 ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸೋತೆ. ಇದರಿಂದಾಗಿ ನನ್ನನ್ನ ಎಂ ಎಲ್ ಸಿ ಮಾಡಬೇಕು ಅಂತ ಮತಕ್ಷೇತ್ರದ ಜನರು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಒತ್ತಡ ಹಾಕಿದ್ದರು. ಆದರೆ ಅವರು 25 ಕೋಟಿ ರೂ. ಕೊಡುವಂತೆ ಕೇಳಿದರು. ಇದಕ್ಕೆ ಪೂರಕ ದಾಖಲೆಗಳು ನನ್ನ ಬಳಿ ಇವೆ, ಇದರ ಬಗ್ಗೆ ಚರ್ಚೆಗೂ ಸಹ ನಾನು ಸಿದ್ದ ಎಂದು ತಿರುಗೇಟು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು