Sunday, January 19, 2025
ಸಿನಿಮಾ

ಒಡೆಯರ್‌ ಮುನ್ನ ಪವನ್‌ ಹೊಸ ಸಿನಿಮಾ | ಕಹಳೆ ಸಿನಿಮಾದಲ್ಲಿ ಕಂಪ್ಲೀಟ್ ಡಿಟೆಲ್ಸ್.

ದರ್ಶನ್‌ ಅವರಿಗೆ ಪವನ್‌ ಒಡೆಯರ್‌ “ಒಡೆಯರ್‌’ ಎಂಬ ಸಿನಿಮಾ ಮಾಡಲಿದ್ದಾರೆಂಬ ಸುದ್ದಿಯನ್ನು ನೀವು ಕೇಳಿರಬಹುದು. ದರ್ಶನ್‌ ಅವರ 50ನೇ ಚಿತ್ರ “ಕುರುಕ್ಷೇತ್ರ’ ಮುಗಿದ ಬೆನ್ನಲ್ಲೇ “ಒಡೆಯರ್‌’ ಆರಂಭವಾಗಲಿದೆ ಎನ್ನಲಾಗಿತ್ತು. ಆದರೆ, ಸ್ವತಃ ದರ್ಶನ್‌ ಟ್ವೀಟ್‌ ಮಾಡಿ “ನನ್ನ ಹೊಸ ಸಿನಿಮಾಗಳ ಬಗ್ಗೆ ಅನಾವಶ್ಯಕ ಚರ್ಚೆ ಬೇಡ. ಸಮಯ ಬಂದಾಗ ನಾನೇ ಹೇಳುತ್ತೇನೆ’ ಎಂದಿದ್ದರು.

ಅಲ್ಲಿಗೆ “ಕುರುಕ್ಷೇತ್ರ’ ನಂತರ ದರ್ಶನ್‌ ಅವರ ಯಾವ ಸಿನಿಮಾ ಸೆಟ್ಟೇರುತ್ತದೆ ಎಂಬ ಪ್ರಶ್ನೆ ಓಡಾಡುತ್ತಲೇ ಇದೆ. ಈ ನಡುವೆಯೇ “ಕುರುಕ್ಷೇತ್ರ’ ನಂತರ ದರ್ಶನ್‌ ತಮ್ಮ ಹಳೆಯ ಕಮಿಟ್‌ಮೆಂಟ್‌ನ ಸಿನಿಮಾವೊಂದನ್ನು ಮುಗಿಸಲಿದ್ದಾರೆನ್ನಲಾಗಿದೆ. ಜೊತೆಗೆ “ಒಡೆಯರ್‌’ ಮುಂದೆ ಹೋಗಿದ್ದು, ಇದು 52ನೇ ಅಥವಾ 53ನೇ ಸಿನಿಮಾವಾಗಬಹುದೆಂಬ ಸುದ್ದಿಯೂ ಓಡಾಡುತ್ತಿದೆ.
ಹಾಗಾದರೆ, ನಿರ್ದೇಶಕ ಪವನ್‌ ಒಡೆಯರ್‌ ದರ್ಶನ್‌ಗೆ “ಒಡೆಯರ್‌’ ಮಾಡುವ ಮುನ್ನ ಬೇರೆ ಸಿನಿಮಾ ಮಾಡಲ್ವಾ, ಸುಮಾರು ಎರಡು ವರ್ಷವರೆಗೆ ಸುಮ್ಮನೆ ಕೂರುತ್ತಾರಾ ಎಂದು ನೀವು ಕೇಳಬಹುದು. ಖಂಡಿತಾ ಇಲ್ಲ, ಪವನ್‌ ಒಡೆಯರ್‌ “ಒಡೆಯರ್‌’ಗೂ ಮುಂಚೆ ಮತ್ತೂಂದು ಸಿನಿಮಾ ಮಾಡಲಿದ್ದಾರೆ.  ಹೌದು, ಪವನ್‌ ಒಡೆಯರ್‌, ದರ್ಶನ್‌ ಸಿನಿಮಾ ಮಾಡುವ ಮುನ್ನ ಬೇರೆಯವರಿಗೊಂದು ಸಿನಿಮಾ ಮಾಡಲಿದ್ದಾರೆ.
ಈಗಾಗಲೇ ಕಥೆಯಲ್ಲಿ ಬಿಝಿ ಇರುವ ಪವನ್‌, ಹೊಸ ವರ್ಷದ ಹೊತ್ತಿಗೆ ಹೊಸ ಸಿನಿಮಾ ಮಾಡುವ ಯೋಚನೆಯಲ್ಲಿದ್ದಾರೆ. ಹಾಗಾದರೆ ಯಾರಿಗೆ ಸಿನಿಮಾ ಮಾಡುತ್ತಾರಾ, ಸ್ಟಾರ್‌ ನಟನಿಗಾ ಅಥವಾ ಹೊಸಬರಿಗಾ ಎಂಬ ಪ್ರಶ್ನೆ ಬರಬಹುದು. ಪವನ್‌ ಈ ಬಾರಿ ಹೊಸಬರಿಗೆ ಸಿನಿಮಾ ಮಾಡಲಿದ್ದಾರೆ. “ಒಂದು ಚಿಕ್ಕ ಕಥೆ ಮಾಡಿಕೊಳ್ಳುತ್ತಿದ್ದೇನೆ. ಅದನ್ನು ಚಿಕ್ಕ ಬಜೆಟ್‌ನಲ್ಲಿ ಮಾಡುವ ಯೋಚನೆ ಇದೆ.
ಈ ಬಾರಿ ಹೊಸಬರಿಗೆ ಸಿನಿಮಾ ಮಾಡಬೇಕೆಂದಿದ್ದೇನೆ’ ಎನ್ನುವುದು ಪವನ್‌ ಮಾತು. ಈ ಸಿನಿಮಾ ಕಮರ್ಷಿಯಲ್‌ ಅಂಶಗಳ ಜೊತೆಗೆ ಹೊಸತನದಿಂದಲೂ ಕೂಡಿರಲಿದೆಯಂತೆ. ಸದ್ಯಕ್ಕೆ ಕಥೆಯಲ್ಲಿ ತೊಡಗಿರುವ ಪವನ್‌, ತಾರಾಗಣ ಸೇರಿದಂತೆ ಇತರ ಅಂಶಗಳ ಬಗ್ಗೆ ಜನವರಿಯಲ್ಲಿ ಗಮನಹರಿಸುವುದಾಗಿ ಹೇಳುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response