Recent Posts

Sunday, January 19, 2025
ರಾಜಕೀಯಸುದ್ದಿ

ಆಡಿಯೋ ಪ್ರಕರಣ; ಶಂಕರಗೌಡ ನನ್ನ ಬಳಿ ಬಂದಿದ್ದು ನಿಜ; ಬಿ.ಎಸ್.ವೈ –ಕಹಳೆ ನ್ಯೂಸ್

ಹುಬ್ಬಳ್ಳಿ : ಆಪರೇಷನ್ ಕಮಲದ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಶಾಸಕರ ಪುತ್ರ ಶಂಕರಗೌಡ ನನ್ನ ಬಳಿ ಬಂದಿದ್ದು ಸತ್ಯ. ನಾನು ಅವರ ಜೊತೆ ಮಾತನಾಡಿದ್ದು ನಿಜ. ಆದರೆ ಕುಮಾರಸ್ವಾಮಿ ತಮಗೆ ಬೇಕಾದನ್ನು ಇಟ್ಟುಕೊಂಡು ಉಳಿದಿದ್ದನ್ನು ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರ ಮಗ ಶಂಕರಗೌಡನನ್ನು ಕುಮಾರಸ್ವಾಮಿಯವರೇ ರಾತ್ರಿ 12.30ಕ್ಕೆ ಗೆಸ್ಟ್ ಹೌಸ್ ಬಳಿಗೆ ಕಳುಹಿಸಿಕೊಟ್ಟಿದ್ದಾರೆ. ನನ್ನ ಬಳಿ ಮಾತನಾಡುವಂತೆ ಮಾಡಿ ಬೇಕಾದ ದಾಖಲೆಗಳನ್ನು ಇಟ್ಟುಕೊಂಡು ಉಳಿದಿದ್ದನ್ನು ಬಿಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ. ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಅತ್ಯಂತ ಪ್ರಾಮಾಣಿಕ ಮತ್ತು ಸರಳ ವ್ಯಕ್ತಿ, ಅವರಿಗೆ 50 ಕೋಟಿ ರೂ.ಕೊಟ್ಟಿದ್ದಾರೆ ಎನ್ನುವುದು ಖಂಡಿಸುತ್ತೇನೆ. ಇದು ನಿಜವಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು