Recent Posts

Sunday, January 19, 2025
ಸಿನಿಮಾಸುದ್ದಿ

‘ಭೈರಾದೇವಿ’ ಚಿತ್ರದ ಶೂಟಿಂಗ್ ವೇಳೆ ರಾಧಿಕಾ ಕುಮಾರಸ್ವಾಮಿಗೆ ತೀವ್ರ ಪೆಟ್ಟು – ಕಹಳೆ ನ್ಯೂಸ್

ಭೈರಾದೇವಿ ಚಿತ್ರದಲ್ಲಿ ರಾಧಿಕಾ ಅಘೋರಿ ರೂಪ ತಾಳಿದ್ದಾರೆ. ಅಷ್ಟೇ ಅಲ್ಲ, ಕಾಳಿ ಅವತಾರದಲ್ಲೂ ಅವರು ಪ್ರೇಕ್ಷಕರ ಎದುರು ಬರಲಿದ್ದಾರೆ. ಇನ್ನು ‘ಭೈರಾದೇವಿ’ ಚಿತ್ರದ ಶೂಟಿಂಗ್ ಪೂರ್ಣಗೊಳ್ಳುವ ಹಂತಕ್ಕೆ ಬಂದು ನಿಂತಿದೆ. ಈ ವೇಳೆ ಚಿತ್ರತಂಡಕ್ಕೆ ಸಮಸ್ಯೆಯೊಂದು ಎದುರಾಗಿದೆ. ಅದೇನೆಂದರೆ, ಚಿತ್ರೀಕರಣದ ವೇಳೆ ನಾಯಕಿ ರಾಧಿಕಾ ಕುಮಾರಸ್ವಾಮಿ ಕೆಳಗೆ ಬಿದ್ದಿದ್ದು, ತೀವ್ರ ಪೆಟ್ಟಾಗಿದೆ.

ಶಾಂತಿನಗರದ ಸ್ಮಶಾನದಲ್ಲಿ ‘ಭೈರಾದೇವಿ’ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ಅವರು ಗೋರಿ ಮೇಲಿನಿಂದ ಅವರು ಕೆಳಗಿಳಿಯುವ ದೃಶ್ಯ ಸೆರೆ ಹಿಡಿಯಲಾಗುತ್ತಿತ್ತು. ಈ ವೇಳೆ ರಾಧಿಕಾ ಆಯತಪ್ಪಿ ಬಿದ್ದಿದ್ದಾರೆ. ಅವರು ಬಿದ್ದ ರಭಸಕ್ಕೆ ಬೆನ್ನು ಹುರಿಗೆ ಪೆಟ್ಟು ಬಿದ್ದಿದೆ. ನಡೆಯಲೂ ಆಗದ ಸ್ಥಿತಿಗೆ ಅವರು ತಲುಪಿದ್ದರು ಎಂದು ಮೂಲಗಳು ತಿಳಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆ ನಂತರ ಶೂಟಿಂಗ್ ಅರ್ಧಕ್ಕೆ ನಿಲ್ಲಿಸಿ ರಾಧಿಕಾರನ್ನು ಮನೆಗೆ ಕರೆದೊಯ್ಯಲಾಗಿದೆ. ಕುಟುಂಬದ ವೈದ್ಯರು ಮನೆಯಲ್ಲೇ ಚಿಕಿತ್ಸೆ ನೀಡಿದ್ದಾರೆ. ಅಷ್ಟೇ ಅಲ್ಲ, ೩೦ ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು