Recent Posts

Sunday, January 19, 2025
ಸುದ್ದಿ

ಸ್ವಚ್ಛ ಪುತ್ತೂರು ತಂಡದಿಂದ ಸ್ವಚ್ಛತಾ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ರಾಮಕೃಷ್ಣ ಮಿಷನ್ ನ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸ್ವಚ್ಛಪುತ್ತೂರು ಕಾರ್ಯಕ್ರಮದ ಮೂರನೇ ಹಂತದ ಮೂರನೇ ಕಾರ್ಯಕ್ರಮ ಮೊಟ್ಟೆತಡ್ಕದ ಅಗ್ನಿಶಾಮಕ ಠಾಣೆಯ ಮುಂಭಾಗ ಮತ್ತು ಸರ್ಕಾರಿ ಪ್ರಾಥಮಿಕ ಶಾಲೆ ಕೆಮ್ಮಿಂಜೆಯ ಆವರಣದಲ್ಲಿ ಭಾನುವಾರ ಜರುಗಿತು.


ಮೊಟ್ಟೆತಡ್ಕ ಜಂಕ್ಷನ್‌ನ ಆವರಣ ಅಗ್ನಿಶಾಮಕ ಠಾಣೆ, ಸರ್ಕಾರಿ ಶಾಲೆ ಹಾಗೂ ಮರಗಿಡಗಳಿಂದ ಕೂಡಿದ್ದು ಒಂದು ಉತ್ತಮ ಗ್ರಾಮವಾಗುವುದಕ್ಕೆ ಬೇಕಾದ ಎಲ್ಲಾ ಅರ್ಹತೆಗಳನ್ನೂ ಹೊಂದಿವೆ. ಆದರೆ ಜನರ ಅನಾಗರಿಕತೆ, ನಗರಸಭೆಯ ನಿರ್ಲಕ್ಷ್ಯ ಹಾಗೂ ಅಗ್ನಿಶಾಮಕ ಠಾಣೆಯಂತಹ ಸರ್ಕಾರಿ ಕಚೇರಿಗಳೆ ಅದರ ಸುತ್ತಮುತ್ತಲಿನ ಸ್ವಚ್ಛತೆಯ ಬಗ್ಗೆ ಗಮನ ಹರಿಸದೇ ಇರುವುದು ಅನೇಕ ತೊಂದರೆಗಳಿಗೆ, ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎನ್ನಬಹುದು. ಆದ್ದರಿಂದ ಈ ಬಾರಿ ಮೊಟ್ಟೆತಡ್ಕ ಪ್ರದೇಶದಲ್ಲಿ ಸ್ವಚ್ಛತೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ರಾಮಕೃಷ್ಣ ಮಿಷನ್‌ನ ಮಾರ್ಗದರ್ಶನದಲ್ಲಿ ಸ್ವಚ್ಛ ಪುತ್ತೂರು ತಂಡ ನಿರ್ಧರಿಸಿತು.

ಜಾಹೀರಾತು
ಜಾಹೀರಾತು
ಜಾಹೀರಾತು


ಕಾರ್ಯಕ್ರಮದಲ್ಲಿ ಪಣಾಜೆಯ ಸುಬೋಧ ಶಾಲೆ ನಿವೃತ್ತ ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ ಶಾಸ್ತ್ರಿ, ನಗರಸಭೆ ಸದಸ್ಯರಾದ ಜಗನ್ನಿವಾಸರಾವ್ ಮತ್ತು ಶೈಲ ಪೈ,ಬಾಲಚಂದ್ರ ರಾವ್, ಗಣೇಶ್ ಆಚಾರ್ಯ ಮತ್ತಿತ್ತರರು ಪಾಲ್ಗೊಂಡಿದ್ದರು. ಅಂತೆಯೇ ಸುಮಾರು ೫೦ ಮಂದಿ, ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಶ್ರೀಗಣೇಶ್ ಅರ್ಥ್ ಮೂವರ್ಸ್ ಇವರು ಕಸವನ್ನು ತೆರವು ಗೊಳಿಸುವುದಕ್ಕಾಗಿ ಉಚಿತ ಟಿಪ್ಪರ್ ಸೇವೆಯನ್ನು ಒದಗಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವರದಿ: ಅರುಣ್ ಕಿರಿಮಂಜೇಶ್ವರ
ದ್ವೀತಿಯ ಬಿ. ಎ
ವಿ. ಸಿ ಪುತ್ತೂರು