Sunday, November 24, 2024
ಸುದ್ದಿ

ವಿವೇಕಾನಂದ ಕಾಲೇಜಿನಲ್ಲಿ ಎರಡು ದಿನಗಳ ಪ್ಯಾಕಲ್ಟಿ ಡೆವಲಪ್‍ಮೆಂಟ್ ಕಾರ್ಯಾಗಾರ – ಕಹಳೆ ನ್ಯೂಸ್

ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಉದ್ಯೋಗ ಮತ್ತು ತರಬೇತಿ ಘಟಕ ಹಾಗೂ ಬೆಂಗಳೂರಿನ ಐಸಿಟಿ ಅಕಾಟೆಮಿಯ ಸಹಯೋಗದಲ್ಲಿ ಉಪನ್ಯಾಸಕರಿಗಾಗಿ ಎರಡು ದಿನಗಳ ಪ್ಯಾಕಲ್ಟಿ ಡೆವಲಪ್‍ಮೆಂಟ್ ಕಾರ್ಯಾಗಾರ ಕಾಲೇಜಿನಲ್ಲಿ ಶುಕ್ರವಾರ ಹಾಗೂ ಶನಿವಾರ ನಡೆಯಿತು.

ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಯಶಸ್ಸನ್ನು ಗಳಿಸಲು ಯಾವುದೇ ಅಡ್ಡದಾರಿಗಳಿಲ್ಲ. ಕಠಿಣ ಪರಿಶ್ರಮ ಹಾಗೂ ಶ್ರದ್ಥೆ ನಮಗಿರಬೇಕು. ಆಸಕ್ತಿ ಹಾಗೂ ಅನುಭವಗಳು ಮಾರ್ಗದರ್ಶಿಗಳಂತೆ ನಮ್ಮನ್ನು ಗುರಿಯೆಡೆಗೆ ಕೊಂಡೊಯ್ಯುತ್ತವೆ. ನಮ್ಮ ಸಾಧನೆ ನಮ್ಮನ್ನು ಗುರುತಿಸುವಂತೆ ಮಾಡುತ್ತದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅದೃಷ್ಟ ಎನ್ನುವುದನ್ನು ನಾವು ಬೇಕೆಂದಾಗ ಪಡೆದುಕೊಳ್ಳಲು ಮತ್ತು ಕಳೆದ ಸಮಯವನ್ನು ಅಗತ್ಯವಿದ್ದಾಗ ಗಳಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೆಯೇ ನಮ್ಮ ಬದುಕಿನಲ್ಲಿ ಎದುರಾಗಬಹುದಾದ ಸಮಸ್ಯೆಗಳಿಗೆ ಅಂತರ್ಜಾಲ ಉತ್ತರಿಸಲಾರದು. ವಿಪರೀತವಾದ ಕಲ್ಪನಾ ಲೋಕವನ್ನು ಬಿಟ್ಟು ವಾಸ್ತವತೆಗೆ ನಮ್ಮನ್ನು ನಾವು ಒಗ್ಗಿಸಿಕೊಳ್ಳುವ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಲೇಜಿನ ಐಕ್ಯೂಎಸಿ ಸಂಯೋಜಕ ಡಾ. ಎಚ್.ಜಿ. ಶ್ರೀಧರ್ ಮಾತನಾಡಿ, ಇತರರನ್ನು ಅರ್ಥೈಸಿಕೊಳ್ಳುವ ಮೊದಲು ನಮ್ಮನ್ನು ನಾವು ಅರಿತುಕೊಳ್ಳುವ ಅವಶ್ಯಕತೆಯಿದೆ. ಮಕ್ಕಳಿಗೆ ಬೋಧನೆ ಮಾಡುವ ಮೊದಲು ನಾವು ನಮ್ಮನ್ನು ಎಲ್ಲಾ ರೀತಿಯಿಂದಲೂ ಸುಸಜ್ಜಿತರನ್ನಾಗಿಸಿಕೊಳ್ಳಬೇಕು. ಕಲಿತು ಆಯಿತು ಎಂಬ ಕಲ್ಪನೆಯೇ ನಮ್ಮಲ್ಲಿಲ್ಲ. ಕಲಿಯ ಬಯಸುವವರಿಗೆ ಪ್ರತಿದಿನವೂ ಹೊಸ ವಿಷಯ ಇದ್ದೇ ಇರುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಐಸಿಟಿ ಅಕಾಡೆಮಿಯ ಕರ್ನಾಟಕ ರಾಜ್ಯ ಮುಖ್ಯಸ್ಥ ಡಿ. ವಿಷ್ಣುಪ್ರಸಾದ್, ಶಿಕ್ಷಣ ಸಂಸ್ಥೆಯೊಂದರಲ್ಲಿ ಉಪನ್ಯಾಸಕರಿಗಾಗಿ ಕಾರ್ಯಾಗಾರ ಹಮ್ಮಿಕೊಳ್ಳುವುದರಿಂದ ಅನೇಕ ವಿದ್ಯಾಥಿಗಳಿಗೆ ಪರೋಕ್ಷ ಲಾಭ ದೊರೆಯುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಎಂ.ಟಿ. ಜಯರಾಮ ಭಟ್ ಮಾತನಾಡಿ, ವಿದ್ಯಾರ್ಥಿಗಳೊಂದಿಗೆ ಬೆರೆತು ಶಿಕ್ಷಕರು ಕಲಿಯುವುದು ಬಹಳಷ್ಟಿದೆ. ವಿವಿಧ ಕಡೆಗಳಿಂದ ಸಂಗ್ರಹಿಸಲ್ಪಟ್ಟ ಅನುಭವವನ್ನು ಹಂಚುವ ಕೆಲಸವನ್ನು ಕಾರ್ಯಾಗಾರಗಳು ಮಾಡುತ್ತದೆ. ಈ ಅವಕಾಶಗಳನ್ನು ಉಪನ್ಯಾಸಕರು ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಕಾಲೇಜಿನ ಉದ್ಯೋಗ ಮತ್ತು ತರಬೇತಿ ಘಟಕದ ಸಂಯೋಜಕಿ ರೇಖಾ ಸ್ವಾಗತಿಸಿ, ಘಟಕದ ಸಂಚಾಲಕಿ, ಕಾಲೇಜಿನ ಗಣಕಶಾಸ್ತ್ರ ವಿಭಾಗದ ಉಪನ್ಯಾಸಕಿ ಜೀವಿತಾ ವಂದಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಅಮೃತಾ ಶ್ಯಾನುಭೋಗ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಹಿರಿಯ ಮ್ಯಾನೇಜರ್ ಹಾಗೂ ತರಬೇತುದಾರ ಜಿನೋ ಜೋಸ್ ಕಾರ್ಯಾಗಾರವನ್ನು ನಡೆಸಿಕೊಟ್ಟರು.