ನವದೆಹಲಿ: ಕರ್ನಾಟಕದ ಕರಾವಳಿಯ ಜನಪ್ರಿಯ ಕ್ರೀಡೆ ಕಂಬಳಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.ಕಂಬಳಕ್ಕೆ ಅವಕಾಶ ನೀಡುವ ಕರ್ನಾಟಕದ ಕಾಯ್ದೆಗೆ ತಡೆ ಕೋರಿ ಪೆಟಾ (ಪೀಪಲ್ ಫಾರ್ ಎಥಿಕಲ್ ಟ್ರೀಟ್ ಮೆಂಟ್ ಆಫ್ ಎನಿಮಲ್ಸ್) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ತಡೆ ನೀಡಲು ನಿರಾಕರಿಸಿದೆ.ಈ ಸಂಬಂಧ ಕರ್ನಾಟಕ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ನೀಡಿರುವ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ನವೆಂಬರ್ 13 ಕ್ಕೆ ನಿಗದಿಪಡಿಸಿದೆ. ಅಲ್ಲದೆ ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಹಾಜರಿರುವಂತೆ ಅಟಾರ್ನಿ ಜನರಲ್ಅವರಿಗೆ ಸೂಚಿಸಿದೆ.
ಸಂಪೂರ್ಣ ನ್ಯಾಯ ದೊರಕುವವರೆಗೂ ಹೋರಾಟ – ಅಶೋಕ್ ರೈ
ಈ ಕುರಿತು ಕಹಳೆ ನ್ಯೂಸ್ ಪ್ರತಿಕ್ರಿಯೆ ನೀಡಿದ ವಿಜಯ ವಿಕ್ರಮ ಕಂಬಳದ ಅಧ್ಯಕ್ಷ ಅಶೋಕ್ ರೈ ಕಂಬಳ ತುಳುವರ ಕ್ರೀಡೆ, ಇದು ನಮ್ಮ ನಂಬಿಕೆಯ ವಿಚಾರ ಇದನ್ನು ನಿಷೇಧಿಸುವುದು ಸರಿಯಲ್ಲ ಮತ್ತು ಕಂಬಳ ನಿಷೇಧ ಸಂಪೂರ್ಣವಾಗಿ ಹಿಂಪಡೆಯುವವರೆಗೂ ಹೋರಾಟ ನಡೆಸುತ್ತೇವೆ. ಸುಪ್ರೀಂ ಕೋಟ್ಟಿನಲ್ಲೂ ನಮಗೆ ನ್ಯಾಯ ದೊರಕುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.