ಇಂದು ಗೋಲ್ಡನ್ ಗಣೇಶ್ ಹಾಗೂ ಶಿಲ್ಪ ಅವರ 11ನೇ ವರ್ಷದ ವಿವಾಹ ವಾರ್ಷಿಕೋತ್ಸವ.2008ರಲ್ಲಿ ಶಿಲ್ಪಾರವರನ್ನು ಗಣಿ ಮದುವೆ ಆಗಿದ್ದರು. ಗಣೇಶ್ ಮದುವೆ ಅವರ ಅಭಿಮಾನಿಗಳಿಗಂತೂ ಶಾಕಿಂಗ್ ಹಾಗೂ ‘ಹಾರ್ಟ್ ಬ್ರೇಕಿಂಗ್ ನ್ಯೂಸ್’ ಆಗಿತ್ತು.
ಒಂದು ಸುಳಿವೂ ಬಿಟ್ಟುಕೊಡದೆ ಗಣಿ ಮದುವೆ ಸಿಕ್ಕಾಪಟ್ಟೆ ಸದ್ದು ಮಾಡಿದ್ದಂತೂ ನಿಜ. ಗಣೇಶ್-ಶಿಲ್ಪಾ ವೈವಾಹಿಕ ಜೀವನ ಮಾತ್ರ ಖುಷಿ ಖುಷಿಯಾಗಿದೆ. ‘ಕಾಮನ್ ಫ್ರೆಂಡ್ನಿಂದ ಇಬ್ಬರೂ ಪರಿಚಯ ಬೆಳೆದು ಫ್ರೆಂಡ್ ಶಿಪ್ ಆಗಿ ನಂತರ ಇಬ್ಬರೂ ವಿವಾಹವಾದರು.
1 ವರ್ಷಗಳ ಗಣೇಶ್-ಶಿಲ್ಪಾ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಚಾರಿತ್ರ್ಯ ಹಾಗೂ ವಿಹಾನ್ ಎಂಬ ಮುದ್ದಾದ ಎರಡು ಮಕ್ಕಳಿದ್ದಾರೆ.
ಇಂಚು ತಮ್ಮ 11ನೇ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಗಣೇಶ್ , ನನ್ನ ಸೌಲ್ ಮೇಟ್, ನನ್ನ ಗೆಳತಿ, ನನ್ನ ಮಾರ್ಗದರ್ಶಕಿ ನನ್ನ ಪ್ರೀತಿ, 11 ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು ಎಂದು ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.