Monday, November 25, 2024
ಸುದ್ದಿ

ಜೀವನದಲ್ಲಿನ ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ಉತ್ತರವಲ್ಲ: ಎನ್.ಮೋಹನ್ – ಕಹಳೆ ನ್ಯೂಸ್

ಪುತ್ತೂರು: ಪ್ರತಿಯೊಬ್ಬನ ಜೀವನದಲ್ಲಿ ಕಷ್ಟ ಸುಖಗಳು ಒಂದೇ ನಾಣ್ಯದ ಎರಡುಮುಖಗಳಿದ್ದಂತೆ ಅವೆರಡನ್ನು ಸಮಾನವಾಗಿ ಸ್ವೀಕರಿಸುವುದು ಮಾನವನ ಧರ್ಮ. ಸಂತಸವಿದ್ದಾಗ ಹಿಗ್ಗಿ, ದುಃಖ ಎದುರಾದಾಗ ಸಾವಿನ ಮೊರೆ ಹೋಗುವುದು ಎಷ್ಟರ ಮಟ್ಟಿಗೆ ಸರಿ ಎಂದು ಯೋಚಿಸಬೇಕು. ಎಲ್ಲಾ ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ಉತ್ತರವಲ್ಲ. ಮಾನಸಿಕ ತಾಳ್ಮೆಯ ಅಭಾವದಿಂದ ಇಂದಿನ ಯುವಜನತೆ ಆತ್ಮಹತ್ಯೆಯ ಮೊರೆಹೋಗುವುದು ಬೇಸರದ ವಿಷಯ ಎಂದು ವಿವೇಕಾನಂದ ಮಹಾವಿದ್ಯಾಲಯದ ಕಛೇರಿ ಸಹಾಯಕ ಎನ್ ಮೋಹನ್ ಹೇಳಿದರು.

ಅವರು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳು ಆಯೋಜಿಸಿದ ಮಣಿಕರ್ಣಿಕ ಮಾತುಗಾರರ ವೇದಿಕೆಯಲ್ಲಿ ಭಾಗವಹಿಸಿ ಆತ್ಮಹತ್ಯೆ ಎಂಬ ವಿಷಯದ ಕುರಿತಾಗಿ ಗುರುವಾರ ಮಾತನಾಡಿದರು.ತಂದೆ ತಾಯಿ ತಮ್ಮ ಮಕ್ಕಳನ್ನು ಅಪಾರ ಕಾಳಜಿಯಿಂದ ಬೆಳೆಸುತ್ತಾರೆ. ಅವರ ಕುರಿತಾಗಿ ಅನೇಕ ಕನಸುಗಳನ್ನು ಕಟ್ಟಿಕೊಳ್ಳುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೀಗಿರುವಾಗ ಬೆಳೆದು ನಿಂತ ಮಕ್ಕಳು ಆತ್ಮಹತ್ಯೆಯ ಹಾದಿ ಹಿಡಿದರೆ ಹೆತ್ತವರ ಪರಿಸ್ಥಿತಿ ಏನಾಗಬಹುದೆಂಬ ಚಿಂತನೆ ಮಕ್ಕಳಲ್ಲಿ ಒಡಮೂಡಬೇಕು. ಎಂತಹ ಸಮಸ್ಯೆಯನ್ನೂ ಎದುರಿಸುವುದಕ್ಕೆ ಸಾಧ್ಯವಿದೆ. ಯಾವ ಸಂದರ್ಭಗಳಲ್ಲೂ ತನಗಿನ್ನು ಬೇರೆ ದಾರಿಯೇ ಇಲ್ಲ ಎಂದು ಕೈಚೆಲ್ಲಿ ಕೂರಬಾರದು ಎಂದು ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿದ್ಯಾರ್ಥಿಗಳಾದ ಅರುಣ್ ಕುಮಾರ್ , ಸಂಕೇತ್ ಕುಮಾರ್, ರಾಮಕಿಶನ್, ದೀಕ್ಷಿತಾ, ದೀಪ್ತಿ, ಜೀವಿತಾ,ತೇಜಶ್ರೀ, ಜಗದೀಶಾ, ವಿನೀತಾ, ಭರತ್, ಸಾಯಿಶ್ರೀ ಪದ್ಮ, ನೀಮಾ, ಅನಘಾ ತಮ್ಮ ಅಭಿಪ್ರಾಯವನ್ನು ವೇದಿಕೆಯಲ್ಲಿ ಹಂಚಿಕೊಂಡರು. ಸಾಯಿಶ್ರೀ ಪದ್ಮ ಹಾಗೇ ತೇಜಶ್ರೀ ವಾರದ ಉತ್ತಮ ಮಾತುಗಾರರಾಗಿಯೂ ದ್ವೀತಿಯ ವರ್ಷದ ವಿದ್ಯಾರ್ಥಿಗಳು ವಾರದ ಮಾತುಗಾರರ ತಂಡವಾಗಿ ಹೊರಹೊಮ್ಮಿತು.

ವೇದಿಕೆಯಲ್ಲಿ ವಿಭಾಗದ ಉಪನ್ಯಾಸಕಿ ಭವ್ಯ.ಪಿ. ಆರ್ ನಿಡ್ಪಳಿ ಕಾರ್ಯಕ್ರಮದ ಕಾರ್ಯದರ್ಶಿ ಮೇಘಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರಮ್ಯ ಸ್ವಾಗತಿಸಿ,ಪ್ರಣಮ್ಯ ವಂದಿಸಿರು. ವಿದ್ಯಾರ್ಥಿನಿ ಸಾಯಿಶ್ರೀ ಪದ್ಮ ಕಾರ್ಯಕ್ರಮ ನಿರ್ವಹಿಸಿದರು.