ಎಲ್ಲ ವಯೋಮಾನದ ಹೆಣ್ಣುಮಕ್ಕಳಿಗೆ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇಗುಲಕ್ಕೆ ಪ್ರವೇಶ ನೀಡಬೇಕೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ಇದನ್ನು ವಿರೋಧಿಸಿದ್ದ ಭಕ್ತರು, ದೇಗುಲ ಪ್ರವೇಶಕ್ಕೆ ಮುಂದಾದ ಮಹಿಳೆಯರಿಗೆ ಅಡ್ಡಿಪಡಿಸಿದ್ದರು. ಇದರಿಂದಾಗಿ ಶಬರಿಮಲೆಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಗಿತ್ತು.
ಈ ಎಲ್ಲ ವಿದ್ಯಮಾನಗಳ ಬಳಿಕ ಇಂದು ಸಂಜೆ ಕುಂಭ ಮಾಸ ಪೂಜೆಗಾಗಿ ಶಬರಿಮಲೆ ದೇಗುಲದ ಗರ್ಭಗುಡಿ ಬಾಗಿಲು ತೆರೆಯಲಿದ್ದು, ಇದರ ಮಧ್ಯೆ 35 ಯುವತಿಯರ ತಂಡ ಅಯ್ಯಪ್ಪನ ದರ್ಶನಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಜೊತೆಗೆ ಈ ಹಿಂದೆ ದೇಗುಲ ಪ್ರವೇಶಿಸಿದ್ದ ಕನಕದುರ್ಗ ಹಾಗೂ ಬಿಂದು ಮತ್ತೆ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿಯೂ ಹೊರ ಬಿದ್ದಿದೆ.
ಇವರನ್ನು ತಡೆಯಲು ಭಕ್ತರ ತಂಡ ಸಿದ್ಧವಾಗಿದ್ದು ಹೀಗಾಗಿ ಘರ್ಷಣೆ ನಡೆಯಬಹುದೆಂಬ ಕಾರಣಕ್ಕೆ ಜಿಲ್ಲಾಡಳಿತ ನಿಷೇಧಾಜ್ಞೆ ಹೇರಲು ಮುಂದಾಗಿದೆ.