Sunday, January 19, 2025
ಅಂಕಣ

ಕೆ. ಗೋಪಾಲಕೃಷ್ಣ ಭಟ್ ಕಟ್ಟೆತ್ತಿಲ ಅವರ ” ಶ್ರೀಗುರು ಪಾದಪದ್ಮ ” ಕವನ – 20

” ಶ್ರೀ ಸ್ಕಂದ “

ಶ್ರೀ ಸುಬ್ರಹ್ಮಣ್ಯ ಶ್ರೀ ಸುಬ್ರಹ್ಮಣ್ಯ | ಶ್ರೀ ಸುಬ್ರಹ್ಮಣ್ಯ ಶ್ರೀ ಸುಬ್ರಹ್ಮಣ್ಯ || ಪ ||

ಶಿವಗಿರಿಜಾಸುತ ಷಣ್ಮುಖದೇವ |
ನಂಬಿದ ಭಕ್ತರನೆಂದಿಗು ಕಾವ ||
ಉಮಾಮಹೇಶ್ವರ ಮುದ್ದಿನ ಕಂದ |
ಕುಕ್ಕೆಲಿ ನೆಲೆಸಿಹ ಶ್ರೀಸ್ಕಂದ || ೧ ||

ಜಾಹೀರಾತು
ಜಾಹೀರಾತು
ಜಾಹೀರಾತು

ಜಯ ನಮೋ ಶ್ರೀಷಣ್ಮಖ |
ವಲ್ಲಿಯ ವರಿಸಿಹ ವಲ್ಲೀಶ ||
ಶರಣು ಶರಣು ಶ್ರೀ ಸುಬ್ರಹ್ಮಣ್ಯ |
ಕಾಪಾಡೆಮ್ಮ ಅಮಿತವರೇಣ್ಯ || ೨ ||

ಜಾಹೀರಾತು
ಜಾಹೀರಾತು
ಜಾಹೀರಾತು

ನಾಗರೂಪ ಶ್ರೀ ಸ್ವಾಮಿ ನೆಲೆಸಿಹ ಕ್ಷೇತ್ರ |
ಆಸ್ತಿಕ ಭಕುತಗೆ ಪರಮ ಪವಿತ್ರ ||
ಪಾಪವ ತೊಳೆಯಲಿಹುದು ಕುಮಾರಧಾರೆ |
ದೇವಲೋಕದ ಅಮೃತವೆರ ಧಾರೆ ಧಾರೆ || ೩ ||

Leave a Response