ಹೆಬ್ರಿ: ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳಿಗೆ ವಿಷ ನೀಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಬ್ರಿಯ ವರಂಗ ಗ್ರಾಮದ ಮಾತಿಬೆಟ್ಟುವಿನಲ್ಲಿ ನಡೆದಿದೆ. ದೀಪಾ (35), ಮಕ್ಕಳಾದ ಶ್ರೇಯಾ (9) ಹಾಗೂ ಪ್ರಿಯಾ (6) ಮೃತಪಟ್ಟವರು.
ಗರ್ಭಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ದೀಪಾ ಹೊಟ್ಟೆ ನೋವು ತಾಳಲಾರದೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಷ ಸೇವಿಸಿದ್ದ ತಾಯಿ, ಮಕ್ಕಳನ್ನು ಫೆ. 10 ರಂದು ಬೆಳಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ದೀಪ ಮತ್ತು ಪ್ರಿಯಾ ಮೃತಪಟ್ಟಿದ್ದು, ಇನ್ನೋರ್ವ ಮಗಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಆಕೆಯೂ ಮೃತಪಟ್ಟಿದ್ದಾಳೆ. ಘಟನೆ ಸಂಬಂಧ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.