ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಕಲಿ ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ಜಾಲಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದು, ಸುಮಾರು 20 ಸಾವಿರ ಕೋಟಿ ರೂಪಾಯಿ ಹಣದ ವಹಿವಾಟು ನಡೆದಿದೆ ಎನ್ನಲಾಗಿದೆ.
ಕಳೆದ ಕೆಲ ವಾರದಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಳೆ ದೆಹಲಿಯಲ್ಲಿ ನಡೆಸಿದ್ದ ಹಲವು ರೈಡ್‌ನಲ್ಲಿ ಈ ಅಕ್ರಮ ವ್ಯವಹಾರಗಳು ಬಯಲಿಗೆ ಬಂದಿದ್ದು, ಪ್ರಮುಖವಾಗಿ ಮೂರು ಗುಂಪುಗಳು ಈ ವ್ಯವಹಾರದಲ್ಲಿದ್ದವು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಾಳಿ ವೇಳೆ ಸುಮಾರು 18 ಸಾವಿರ ಕೋಟಿ ಮೌಲ್ಯದ ನಕಲಿ ಬಿಲ್ ಗಳು ಪತ್ತೆಯಾಗಿದೆ. ಈ ಆರೋಪಿಗಳು ಹಲವು ವರ್ಷಗಳಿಂದ ಈ ದಂಧೆಯಲ್ಲಿ ತೊಡಗಿಕೊಂಡಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ನೀಡದ ಅಧಿಕಾರಿಗಳು ತನಿಖೆ ಬಳಿಕ ಇದರ ಸಂಪೂರ್ಣ ವಿವರ ಬಹಿರಂಗವಾಗಲಿದೆ ಎಂದಿದ್ದಾರೆ.