ಕಾರ್ಕಳ: ನಾಗ ಬೆರ್ಮೆರ ಗುಡಿ ಮತ್ತು ನಾಗಬನಕ್ಕೆ ನುಗ್ಗಿ ನಾಗನ ವಿಗ್ರಹಗಳನ್ನು ಕಿತ್ತು ಬಾವಿಗೆಸೆದ ಘಟನೆ ನಡೆದಿರುವುದು ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಬ್ರಾಮರಿ ಬಳಿ ಇರುವ ನಾಗಬನ ಹಾಗೂ ನಾಗ ಬೆರ್ಮೆರ್ ಸನ್ನಿದಾನದಲ್ಲಿ ನಡೆದಿದೆ.
ಎಪ್ರಿಲ್ ತಿಂಗಳಲ್ಲಿ ಡಕ್ಕೆಬಲಿ ಸೇವೆ ನಡೆಯಲಿದ್ದು ಹಿಂದುಗಳೆಲ್ಲ ಶ್ರದ್ದಾಭಕ್ತಿಯಿಂದ ಪೂಜಿಸುತಿದ್ದ ಮೂರ್ತಿಗಳನ್ನು ರಾತ್ರೋ ರಾತ್ರಿ ದುಷ್ಕರ್ಮಿಗಳು ಕಿತ್ತೆಸೆದು ಅನ್ಯಾಯ ಮಾಡಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.
ಬೆರ್ಮೆರ ಗುಡಿಯಲ್ಲಿದ್ದ ಮೂರ್ತಿಗಳು, ನಾಗಬನದಲ್ಲಿದ್ದ ನಾಗನ ವಿಗ್ರಹಗಳೆಲ್ಲವನ್ನೂ ಕಿತ್ತು ಗುಡಿಗೆ ಹಾನಿ ಮಾಡಿದ ಘಟನೆಯ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ದೈವದೇವರನ್ನು ನಂಬುವ ಯಾವ ಹಿಂದುವೂ ಕೂಡ ಹೀಗೆ ಮಾಡಲಾರ, ಇದು ಹಿಂದುಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಲೆಂದೇ ನಡೆಸಿದ ವಿಕೃತ ಮನಸ್ಸುಗಳ ಕೃತ್ಯವಾಗಿರುವ ಶಂಕೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.
ಯಾವ ದೇವರು ಮೆಚ್ಚದ ಕೃತ್ಯ ಇದು..!
ನಾಗ ದೇವರೇ ನೀವೆ ನೋಡಿಕೊಳ್ಳಿ..!
ನಾಗಬನಕ್ಕೆ ನುಗ್ಗಿ ನಾಗ ವಿಗ್ರಹಗಳನ್ನ ಬಾವಿಗೆಸೆದ ಪಾಪಿಗಳು..!
ಕಾರ್ಕಳ ತಾಲೂಕಿನ ಬ್ರಾಮರಿ ಬಳಿ ನಡೆದ ಘಟನೆ..!