ಚಿಕ್ಕೋಡಿ: ನ್ಯಾಯವಾದಿಗಳಿಗೆ ಆರ್ಥಿಕ ಭದ್ರತೆ ಒದಗಿಸುವಂತೆ ಚಿಕ್ಕೋಡಿ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು ತಹಶೀಲ್ದಾರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಚಿಕ್ಕೋಡಿ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು ಕೋರ್ಟ ಕಲಾಪದಿಂದ ದೂರ ಉಳಿದು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ನ್ಯಾಯವಾದಿಗಳ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ತಹಶೀಲ್ದಾರ ಡಾ.ಸಂತೋಷ ಬಿರಾದರ ಅವರ ಮೂಲಕ ಮನವಿ ಸಲ್ಲಿಸಿದರು.
ನ್ಯಾಯವಾದಿ ಸತೀಶ ಕುಲಕರ್ಣಿ ಮಾತನಾಡಿ, ನ್ಯಾಯವಾದಿಗಳ ಕಾಯ್ದೆ 1961ರ ಪ್ರಕಾರ ನೋಂದಣಿಯಾದ ನ್ಯಾಯವಾದಿಗಳ ಸಂಘಕ್ಕೆ ತಾಲೂಕಾ ಮಟ್ಟದ ನ್ಯಾಯಾಲಯದ ಆವರಣದಲ್ಲಿ ಸೂಕ್ತವಾದ ಕಟ್ಟಡವಿಲ್ಲ, ಬಡಜನರ ಪರವಾಗಿ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುವ ನ್ಯಾಯವಾದಿಗಳಿಗೆ ಆರ್ಥಿಕ ಭದ್ರತೆಯಿಲ್ಲ, ಕಲ್ಯಾಣ ನಿಧಿಯಲ್ಲಿ ಹೆಚ್ಚಿನ ಬಿಡುಗಡೆ ಮಾಡಬೇಕು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿದರು.
ನ್ಯಾಯವಾದಿ ಎಂ.ಬಿ.ಪಾಟೀಲ, ಗಿರೀಶ ಕುಂಡ್ರುಕ, ವ್ಹಿ.ಜಿ.ಮಾಧಪ್ಪಗೋಳ, ಈ.ಎಂ.ಪಟೇಲ, ಬಿ.ಬಿ.ಜಾಧವ, ಎಸ್.ಆರ್.ಹರಕೆ, ಎಸ್.ಜಿ.ಹಿರೇಮಠ, ಅಜೀತ ಬೋನೆ, ಎ.ಆರ್.ಪಾಟೀಲ, ಎಂ.ಐ.ಬೆಂಡವಾಡೆ, ಎನ್.ಡಿ.ಶೆಟ್ಟಿ, ಎಸ್.ಬಿ.ಪೂಜಾರಿ, ಡಿ.ಎನ್.ಪಾಟೀಲ ಇದ್ದರು.