Recent Posts

Sunday, January 19, 2025
ಸುದ್ದಿ

ಅಯೋಧ್ಯೆ ವಿವಾದ ಇತ್ಯರ್ಥಕ್ಕೆ ಡಿ.6ರೊಳಗೆ ಕರಡು ಸಿದ್ದ | ನಿರ್ಮಾಣವಾಗಲಿದೆ ಭವ್ಯ ಮಂದಿರ.

ಲಕ್ನೋ : ಅಯೋಧ್ಯಾ ವಿವಾದವನ್ನು ಶಾಂತಿಯುತವಾಗಿ ಇತ್ಯರ್ಥ ಪಡಿಸುವ ಪ್ರಸ್ತಾವವೊಂದರ ಕರಡನ್ನು ಡಿ.6ರೊಳಗೆ (1992ರಲ್ಲಿ ಬಾಬರಿ ಮಸೀದಿ ಧ್ವಂಸಗೊಂಡ ದಿನ) ತಾನು ಸಿದ್ಧಪಡಿಸುವುದಾಗಿ ಉತ್ತರ ಪ್ರದೇಶ ಶಿಯಾ ಸೆಂಟ್ರಲ್‌ ವಕ್‌ಫ್ ಮಂಡಳಿ ಹೇಳಿದೆ.

ಮಂಡಳಿ ಅಧ್ಯಕ್ಷ ವಾಸಿಂ ರಿಜ್ವಿ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ ಈ ತಿಂಗಳಲ್ಲಿ ನಾನು ಅಯೋಧ್ಯೆಗೆ ಭೇಟಿ ನೀಡಿ ಅಲ್ಲಿನ ಸಾಧುಗಳು ಹಾಗೂ ಮಹಾಂತರನ್ನು ಭೇಟಿಯಾಗುತ್ತೇನೆ ಎಂದು ಹೇಳಿದರು. ಆಯೋಧ್ಯಾ ವಿವಾದವನ್ನು ಪರಸ್ಪರ ತಿಳಿವಳಿಕೆ ಮತ್ತು ಹೊಂದಾಣಿಕೆಯ ನೆಲೆಯಲ್ಲಿ ಶಾಂತಿಯುತವಾಗಿ ಇತ್ಯರ್ಥಡಿಸುವ ಪ್ರಸ್ತಾವವನ್ನು ನಾನು ಈ ಹಿಂದೆಯೇ ಅಯೋಧ್ಯೆಯ ಸಾಧುಗಳು ಮತ್ತು ಮಹಾಂತರೊಂದಿಗೆ ಶರತ್ತುಗಳು ಮತ್ತು ನಿಬಂಧನೆಗಳ ಬಗ್ಗೆ ಚರ್ಚಿಸಿದ್ದೇನೆ ಎಂದು ರಿಜ್ವಿ ಹೇಳಿದರು.
ಡಿ.6ರ ಒಳಗೆ ನಾವು ಪರಸ್ಪರ ತಿಳಿವಳಿಕೆಯ ಒಪ್ಪಂದಕ್ಕೆ ಬರಲಿರುವುದಾಗಿ ನಾನು ಹಾರೈಸುತ್ತೇನೆ ಎಂದು ರಿಜ್ವಿ ಹೇಳಿದರು. ರಿಜ್ವಿ  ಅವರು ಕಳೆದ ತಿಂಗಳಲ್ಲಿ ಆರ್ಟ್‌ ಆಫ್ ಲಿವಿಂಗ್‌ನ ಸ್ಥಾಪಕ ಶ್ರೀ ಶ್ರೀ ರವಿ ಶಂಕರ್‌ ಗುರೂಜಿ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ, ಅಯೋಧ್ಯೆಯಲ್ಲಿ  ರಾಮ ಮಂದಿರ ನಿರ್ಮಿಸುವ ಯೋಜನೆ ಕುರಿತಾದ ಮಂಡಳಿಯ ನಿಲುವನ್ನು ತಿಳಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response