ಭೋಪಾಲ್: ಮದುವೆಯಾಗಲು ನಿರಾಕಸಿದಳು ಎಂಬ ಕಾರಣಕ್ಕಾಗಿ ಮಧ್ಯಪ್ರದೇಶದ ಉದಯಪುರದಲ್ಲಿ ಹಿಂದೂ ಮಹಿಳೆಯನ್ನು ಮುಸ್ಲಿಂ ವ್ಯಕ್ತಿಯೊಬ್ಬ ಕೊಲೆ ಮಾಡಿದ್ದಾನೆ.
ಟೀನಾ ರಜಾವತ್ ಎಂಬ 36 ವರ್ಷದ ಮಹಿಳೆಯ ಕಾರಿಗೆ ನಯೀಮ್ ಎಂಬಾತ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಹಲವು ದಿನ ಕಳೆದ ಬಳಿಕ ಆತ ಮಹಿಳೆಯೊಂದಿಗೆ ಆತ್ಮೀಯವಾಗಿದ್ದು ಇತ್ತೀಚೆಗೆ ಮದುವೆಯಾಗು ಎಂದು ಪೀಡಿಸಿದ್ದ. ಮಹಿಳೆ ನಿರಾಕರಿಸಿ, ಆತನನ್ನು ಕೆಲಸದಿಂದ ತೆಗೆದುಹಾಕಿದ್ದರು.
ನಗರದ ಕುಂಕುಮ್ ಅಪಾರ್ಟ್ ಮೆಂಟ್ ಬಳಿ ಟೀನಾ ನಡೆದುಕೊಂಡು ಹೋಗುವಾಗ ದಾಳಿ ನಯೀಮ್ ಎದೆಗೆ ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಸ್ಥಳೀಯರು ಟೀನಾರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟೊತ್ತಿಗೆ ಟೀನಾ ಮೃತಪಟ್ಟಿದ್ದರು. ಈಗ ನಯೀಮ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ನಯೀಮ್ ವಿರುದ್ಧ ಹಿಂದೆಯೂ ಹಲ್ಲೆ ಆರೋಪದಲ್ಲಿ ದೂರು ದಾಖಲಾಗಿತ್ತು, ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದರು ಎಂದು ಕಹಳೆ ನ್ಯೂಸ್ ಗೆ ತಿಳಿದುಬಂದಿದೆ.