ವ್ಯಾಲೆಂಟೈನ್ಸ್ ಡೇ ಶುಭ ಸಂದರ್ಭದಲ್ಲಿ ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದೆ. ಎಟಿಎಂ ಕಾರ್ಡ್(ಡೆಬಿಟ್ ಕಾರ್ಡ್) ಗಳಲ್ಲಿ ಗ್ರಾಹಕರ ಫೋಟೋ ಮುದ್ರಿಸುವ ಅವಕಾಶ ನೀಡಿದೆ.
ಪ್ರತಿ ವರ್ಷ ಫೆಬ್ರವರಿ 14ರಂದು ಪ್ರೇಮಿಗಳ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ಬಾರಿಯೂ ವಿಶ್ವದಾದ್ಯಂತ ಪ್ರೇಮಿಗಳ ದಿನದ ಸಂಭ್ರಮ ಮನೆ ಮಾಡಿದೆ.
ಇದಕ್ಕಾಗಿ ಬ್ಯಾಂಕ್, ಎಸ್.ಬಿ.ಐ. ಇನ್ ಟಚ್ ಶಾಖೆಯನ್ನು ತೆರೆದಿದೆ. ಈ ಶಾಖೆಯಲ್ಲಿ ಖಾತೆ ತೆರೆದ ನಂತರ ನಿಮಗೆ ಆಧುನೀಕ ವ್ಯವಸ್ಥೆಗಳು ಲಭ್ಯವಾಗಲಿವೆ. ಬ್ಯಾಂಕ್ ನಲ್ಲಿ ಸಾಲಿನಲ್ಲಿ ನಿಂತು ಕೆಲಸ ಮಾಡಬೇಕಾಗಿಲ್ಲ. ಎಸ್.ಬಿ.ಐ. ಇನ್ ಟಚ್ ನಲ್ಲಿ ಎಲ್ಲ ಕೆಲಸ ಆನ್ಲೈನ್ ಮೂಲಕವೇ ನಡೆಯಲಿದೆ.
ಡೆಬಿಟ್ ಕಾರ್ಡ್ ನಲ್ಲಿ ನಿಮ್ಮ ಫೋಟೋ ಬೇಕೆಂದ್ರೆ 15 ನಿಮಿಷದಲ್ಲಿ ಈ ಕೆಲಸ ಮಾಡಿ ಮುಗಿಸಬಹುದಾಗಿದೆ.ಇದಕ್ಕಾಗಿ ನೀವು ಬ್ಯಾಂಕ್ ಗೆ ಹೋಗಬೇಕಾಗುತ್ತದೆ. ಅಲ್ಲಿ AOK ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು.
ಬಾಯ್ ಫ್ರೆಂಡ್ ಅಥವಾ ಗರ್ಲ್ ಫ್ರೆಂಡ್ ಗೆ ಉಡುಗೊರೆ ನೀಡಲು ಬಯಸಿದ್ದರೆ ಅವ್ರ ಹೆಸ್ರಿನಲ್ಲಿ ಖಾತೆ ತೆರೆಯಬೇಕು. ಬ್ಯಾಂಕ್ ನ ಈ ಶಾಖೆಯಲ್ಲಿ ಖಾತೆ ತೆರೆಯುವುದು ಸುಲಭ. ಸದ್ಯ ದೇಶದ 143 ಎಸ್.ಬಿ.ಐ. ಬ್ರ್ಯಾಂಚ್ ಗಳಲ್ಲಿ ಎಸ್.ಬಿ.ಐ. ಇನ್ ಟಚ್ ಶಾಖೆಗಳಿವೆ.