Recent Posts

Sunday, January 19, 2025
ಸುದ್ದಿ

ಕಾಂಗ್ರೆಸ್ ನ ಪ್ರಬಲ ಜಿಲ್ಲಾ ನಾಯಕರು ನ.11ರಂದು ಬಿಜೆಪಿಗೆ ಸೇರ್ಪಡೆ – ಸಂಜೀವ ಮಠಂದೂರು.

ಮಂಗಳೂರು : ಕಾಂಗ್ರೆಸ್ ನ ಪ್ರಬಲ ಜಿಲ್ಲಾ ನಾಯಕರು ಶೀಘ್ರದಲ್ಲೇ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ತಿಳಿಸಿದ್ದಾರೆ. ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ಬಿಜೆಪಿಯ ಪರಿವರ್ತನಾ ಯಾತ್ರೆ 8 ರಂದು ಸಕಲೇಶಪುರ ಮೂಲಕ ದ.ಕ ತಲುಪಲಿದೆ. ಗುಂಡ್ಯದಲ್ಲಿ ಯಾತ್ರೆ ಗೆ ಜಿಲ್ಲೆಯ ವತಿಯಿಂದ ಸ್ವಾಗತ ಮಾಡಿಕೊಳ್ಳಲಾಗುವುದು .ನ 8 ಹಾಗೂ 9 ರಂದು ಟಿಪ್ಪು ಜಯಂತಿ ಸಲುವಾಗಿ ಯಾತ್ರೆಗೆ ವಿರಾಮ ಘೋಷಿಸಲಾಗಿದ್ದು 11 ರಂದು ಸುಳ್ಯ, ಪುತ್ತೂರು ಹಾಗೂ ಬೆಳ್ತಂಗಡಿಯ ಮೂಲಕ ಯಾತ್ರೆ ಸಾಗುಲಿರುವುದು ಎಂದು ತಿಳಿಸಿದರು. ನ 11 ರಂದು ಬಂಟ್ವಾಳ, ಮೂಡುಬಿದ್ರೆಯಾಗಿ ನಗರದ ನೆಹರು ಮೈದಾನ ತಲುಪಿ ಇಲ್ಲಿಯೇ ಯಾತ್ರೆ ಕೊನೆಗೊಳ್ಳಲಿರುವುದು. ಪರಿವರ್ತನಾ ಯಾತ್ರೆಯ ಸಮಾವೇಶಕ್ಕಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರ ಆಗಮಿಸಲಿದ್ದು ಅಂದೇ ಕಾಂಗ್ರೆಸ್ ನ ಪ್ರಬಲ ಜಿಲ್ಲಾ ನಾಯಕರ ಬಿಜೆಪಿ ಸೇರ್ಪಡೆಯಾಗಲಿದೆ ಎಂದರು. ಅಲ್ಲದೆ ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಕೇಂದ್ರ ಸರ್ಕಾರದ ಸಾಧನೆ, ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ಹತ್ಯೆ ಗಳು ಹಾಗೂ ಅವರ ಮೇಲಿನ ಆಕ್ರಮಣವೂ ಚರ್ಚೆಯಾಗಲಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಟಿಯಲ್ಲಿ ನಾಯಕರಾದ ಉಮೇಶ್ ಕೋಟ್ಯಾನ್, ಬ್ರಿಜೇಶ್ ಚೌಟ, ಕಿಶೋರ್ ರೈ, ಸತ್ಯಜಿತ್ ಸುರತ್ಕಲ್ ಉಪಸ್ಥಿತರಿದ್ದರು.

ಜಾಹೀರಾತು

ಜಾಹೀರಾತು
ಜಾಹೀರಾತು

Leave a Response