Saturday, November 23, 2024
ಸುದ್ದಿ

ಕೊರಿಂಜ-ಉರುವಾಲು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ಮಂಜುನಾಥ ಸ್ವಾಮಿ ವೇದಿಕೆಯಲ್ಲಿ ನಡೆದ ಹಿಂದೂ ರಾಷ್ಟ್ರ-ಜಾಗೃತಿ ಸಭೆ – ಕಹಳೆ ನ್ಯೂಸ್

ಬೆಳ್ತಂಗಡಿ: ಇಲ್ಲಿಯ ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ಮಂಜುನಾಥ ಸ್ವಾಮಿ ವೇದಿಕೆಯಲ್ಲಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸಮಸ್ತ ಹಿಂದೂ ಧರ್ಮ ಪ್ರೇಮಿಗಳ ವತಿಯಿಂದ ಹಿಂದೂ ರಾಷ್ಟ್ರ ಜಾಗೃತಿ ಸಭೆಯು ನಡೆಯಿತು.

ಸಭೆಯ ಉದ್ಘಾಟನೆಯನ್ನು ದೀಪಪ್ರಜ್ವಲನೆಯೊಂದಿಗೆ ಮಾಡಲಾಯಿತು. ಧಾರ್ಮಿಕ ಮುಖಂಡರಾದ ಶ್ರೀ.
ಶ್ರೀನಿವಾಸ ಮುಚ್ಚಿಂತಾಯ ದೀಪಪ್ರಜ್ವಲನೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸೌ. ಲಕ್ಷ್ಮೀ ಪೈ. ಇವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದಿನ ಜಾತ್ಯಾತೀತ ಸರ್ಕಾರ ಹಿಂದೂಗಳಿಗೆ ನಿರಂತರ ಅನ್ಯಾಯ ಮಾಡುತ್ತಿದೆ, ಹಿಂದೂಗಳ ದೇವಸ್ಥಾನದ ಹಣವನ್ನು ಇತರ ಪಂಥದವರ ಅಭಿವೃದ್ಧಿಗಾಗಿ ಖರ್ಚು ಮಾಡುತ್ತಿರುವುದರಿಂದಲೇ ಇಂದು ದೇಶದಲ್ಲಿ ಲವ್ ಜಿಹಾದ್, ಲ್ಯಾಂಡ್ ಜಿಹಾದ್ , ಗೋಹತ್ಯೆ, ಹಿಂದೂಗಳ ಮತಾಂತರ ನಡೆಯುತ್ತಲೇ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕರ್ನಾಟಕ ಸರಕಾರ ಇಂದು ದೇವಸ್ಥಾನದ ಹಣವನ್ನು ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ವರ್ಗಾಯಿಸಿ ಭಕ್ತರು ಹಾಕಿದ ಹುಂಡಿ ಹಣವನ್ನು ಚರಂಡಿ ದುರಸ್ತಿಗೆ ಬಳಕೆ ಮಾಡುತ್ತಿದೆ. ಇಂದು ಟಿಪ್ಪು ಜಯಂತಿಗೆ ಸರಕಾರಿದಿಂದಲೇ ಹಣ ಖರ್ಚು ಆಚರಿಸುತ್ತದೆ ಆದರೆ ಹಂಪಿ ಉತ್ಸವ ಮಾಡಲು ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ, ಇದು ಸರ್ಕಾರ ದ್ವಂದ್ವ ನೀತಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಎಲ್ಲಾ ಸಮಸ್ಯೆಗೆ ಏಕೈಕ ಪರಿಹಾರ 100 ಕೋಟಿಯಷ್ಟು ಹಿಂದೂಗಳಿಗಳಿರುವ ಭಾರತದಲ್ಲಿ ಹಿಂದೂಗಳಿಗೆ ತಮ್ಮದೇ ಆದ ರಾಷ್ಟ್ರದ ಅವಶ್ಯಕತೆ ಇದೆ ಎಂದು ತಮ್ಮ ವಿಚಾರ ಮಂಡಿಸಿದರು.

“ಧರ್ಮ ಉಳಿದರೆ ಸಂಸ್ಕ್ರತಿ ಉಳಿದೀತು”- ಶ್ರೀ. ಶ್ರೀನಿವಾಸ ಮುಚ್ಚಿಂತ್ತಾಯ.
ಮಕ್ಕಳಿಗೆ ಧರ್ಮ ಶಿಕ್ಷಣ ಕೊಟ್ಟು ಒಳ್ಳೆಯ ಸಂಸ್ಕಾರ ಬೆಳೆಸಿದಲ್ಲಿ ಮುಂದೆ ಉತ್ತಮ ಪ್ರಜೆಗಳಾಗಬಹುದು,ಪ್ರತಿ ಮನೆಯಲ್ಲಿ ಧರ್ಮಶಿಕ್ಷಣದ ಅವಶ್ಯಕತೆ ಇದೆ. ಧರ್ಮಕ್ಕೆ ಹಾನಿಯಾಗದಂತೆ ನಮ್ಮ ಕಾರ್ಯ ಆಗಬೇಕು, ಸಾಮಾಜಿಕ ಜೀವನದಲ್ಲಿ ನೈತಿಕ ಪರಿಶುದ್ಧತೆಯನ್ನು ಬೆಳೆಸಬೇಕು,ನಮ್ಮ ಪ್ರತಿಯೊಂದು ಕಾರ್ಯದಲ್ಲಿ ಭಗವಂತನ ಅಧಿಷ್ಟಾನಿವಿರಬೇಕು, ಪ್ರಸ್ತುತ. ಸ್ಥಿತಿಯನ್ನು ಗಮನಿಸಿದಾಗ ಹಿಂದೂ ರಾಷ್ಟ್ರ ದ ಅವಶ್ಯಕತೆ ಇದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಶಂಖನಾದೊಂದಿಗೆ ಆರಂಭಿಸಲಾಯಿತು. ಹಿಂದೂ ಜನಜಾಗೃತಿ ಸಮಿತಿಯ ಪರಿಚಯವನ್ನು ಶ್ರೀ. ದಯಾನಂದ ಹೆಗ್ಡೆ ಇವರು ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಸೌ. ವಂದನಾ ಇವರು ಮಾಡಿದರು.

ಸಭೆಯಲ್ಲಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರರಾದ ಶ್ರೀ. ದಿನಕರ ಪೂಜಾರಿ ಕಡ್ತಿಲ, ಗ್ರಾಮೋತ್ಥನ ಸೇವಾ ಸಂಸ್ಥೆ – ಉರುವಾಲು ಇದರ ಸಂಯೋಜರಾದ ಶ್ರೀ. ದುರ್ಗಾಪ್ರಸಾದ್, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ. ಉದಯ ಕುಮಾರ್ ಬಿ.ಕೆ, ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ಅಧ್ಯಕ್ಷ ಶ್ರೀ. ಸೇಸಪ್ಪ ರೈ. ಕೊರಿಂಜ, ಶ್ರೀ. ಯೋಗೀಶ ಪೂಜಾರಿ ಕಡ್ತಿಲ, ಶ್ರೀ ಧ.ಗ್ರಾ.ಯೋ. ಸೇವಾಪ್ರತಿನಿಧಿ ಶ್ರೀ. ಸೀತಾರಾಮ ಆಳ್ವ ಕೊರಿಂಜ, ಶ್ರೀ. ದುಗ್ಗಪ್ಪ ನಾಯ್ಕ, ಶ್ರೀ ಸುಂದರ ಪೂಜಾರಿ, ಶ್ರೀ.ರಾಜರಾಮ ಪುತ್ತೂರಾಯರು, ಪ್ರಗತಿ ಬಂಧು ಒಕ್ಕೂಟದ ಉಪಾಧ್ಯಕ್ಷರಾದ ಶ್ರೀ ಮೋನಪ್ಪ ಗೌಡ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.