Sunday, January 19, 2025
ಸುದ್ದಿ

ಯೋಧರು ಸಂಚರಿಸುತ್ತಿದ್ದ ದಾರಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕೊಟ್ಟಿದ್ದೇ ಅನಾಹುತಕ್ಕೆ ಕಾರಣ – ಕಹಳೆ ನ್ಯೂಸ್

ಪುಲ್ವಾಮಾದ ಆವಂತಿಪೋರಾ ರಸ್ತೆಯಲ್ಲಿ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿದ್ದೇ ಅನಾಹುತಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಈ ರೀತಿ ನಾಗರಿಕ ವಾಹನಗಳ ಪ್ರವೇಶಕ್ಕೆ ಅವಕಾಶ ಮಾಡಿದ್ದನ್ನೇ ದುರುಪಯೋಗ ಮಾಡಿಕೊಂಡ ಉಗ್ರ ಆದಿಲ್ ದರ್ ಸ್ಫೋಟಕಗಳು ತುಂಬಿದ್ದ ಟ್ರಕ್ ಅನ್ನು ಸೇನಾ ವಾಹನಕ್ಕೆ ಡಿಕ್ಕಿ ಹೊಡೆಸಿದ್ದಾನೆ ಎನ್ನಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೇಂದ್ರ ಸರ್ಕಾರ ಹಾಗೂ ಭದ್ರತಾ ಸಂಸ್ಥೆಗಳು ನೀಡಿದ ಮಾಹಿತಿಗಳ ಅನುಸಾರ ಯೋಧರನ್ನು ಸ್ಥಳಾಂತರಿಸುತ್ತಿದ್ದ ರಸ್ತೆಗಳಲ್ಲಿ ಭಾರಿ ಭದ್ರತೆ ಕೈಗೊಳ್ಳಲಾಗುತ್ತಿತ್ತು. ಯೋಧರು ಗನ್ ಹಿಡಿದು ರಸ್ತೆಯ ಇಕ್ಕೆಲಗಳಲ್ಲಿ ಕಾಯುತ್ತಿದ್ದರು.

ರಸ್ತೆ ಪ್ರವೇಶಿಸುವ ಎಲ್ಲ ವಾಹನಗಳನ್ನು ಸಂಪೂರ್ಣ ತಪಾಸಣೆ ನಡೆಸಿ ಬಿಡಲಾಗುತ್ತಿತ್ತು. ಆದರೆ, ಉಗ್ರ ಆದಿಲ್ ಖಾಲಿ ವಾಹನದ ಮೂಲಕ ರಸ್ತೆಗೆ ಪ್ರವೇಶಿಸಿ, ಸರ್ವೀಸ್ ರೋಡ್ ಬಳಸಿಕೊಂಡು ರಸ್ತೆ ಪಕ್ಕದಲ್ಲಿರುವ ಯಾವುದೋ ಹಳ್ಳಿಗಳಿಗೆ ಹೋಗಿ ಅಲ್ಲಿಂದ ಸ್ಫೋಟಕಗಳನ್ನು ತುಂಬಿಕೊಂಡು ವಾಪಸ್ ಮುಖ್ಯ ರಸ್ತೆಗೆ ಬಂದಿದ್ದಾನೆ ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.