Sunday, January 19, 2025
ಸುದ್ದಿ

ಕರ್ನಾಟಕದಲ್ಲೂ ಯೋಗಿಗಳ ರಾಜಕೀಯ | ವಜ್ರದೇಹಿ ಶ್ರೀ, ಮಾದಾರಚೆನ್ನಯ್ಯ ಶ್ರೀ, ವಿದ್ಯಾಭೂಷಣ ಬಿ.ಜೆ.ಪಿ. ಅಭ್ಯರ್ಥಿಗಳು.

ಬೆಂಗಳೂರು : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪ್ರಭಾವ ಕರ್ನಾಟಕದ ರಾಜಕೀಯದ ಮೇಲೆ ಬೀಳುತ್ತಿರುವುದು ಈಗ ಸ್ಪಷ್ಟವಾಗಿದೆ. ಸ್ವಾಮೀಜಿ, ಮಠಾಧೀಶರು ಚುನಾವಣೆ ಅಖಾಡಕ್ಕೆ ಇಳಿಯಲು ಮುಂದಾಗುತ್ತಿದ್ದಾರೆ. ಆರೆಸ್ಸೆಸ್, ಬಿಜೆಪಿ ಅಲ್ಲದೆ ಕಾಂಗ್ರೆಸ್ ಕೂಡಾ ಖಾವಿಧಾರಿಗಳ ಮನ ಓಲೈಕೆಯಲ್ಲಿ ತೊಡಗಿವೆ.

ಉತ್ತರ ಪ್ರದೇಶದಲ್ಲಿ ಗೋರಖ್‌ ನಾಥ ಪರಂಪರೆಯ ಯೋಗಿ ಆದಿತ್ಯನಾಥ್ ಅವರು ದಿಗ್ವಿಜಯ ಸಾಧಿಸಿರುವುದು ಈಗ ಇತಿಹಾಸ. ಕರ್ನಾಟಕದಲ್ಲೂ ಇದೇ ರೀತಿ ಬದಲಾವಣೆಯ ಅಲೆ ತರಲು ಬಿಜೆಪಿ ಯತ್ನಿಸುತ್ತಿದೆ. ರಾಜ್ಯ ಕೆಲ ಪ್ರಮುಖ ಮಠಾಧೀಶರನ್ನು ಚುನಾವಣಾ ಕಣಕ್ಕಿಳಿಸುವ ಯೋಜನೆಯನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಕಿಕೊಂಡಿದ್ದಾರೆ.ಮತ ಬ್ಯಾಂಕಿಗೆ ಅನುಗುಣವಾಗಿ ಎಲ್ಲಾ ಜಾತಿ ವರ್ಗದ ಮಠಾಧೀಶರಿಗೆ ಗಾಳ ಹಾಕಲಾಗುತ್ತಿದೆ. ಮುಖ್ಯವಾಗಿ ಸಿಎಂ ಸಿದ್ದರಾಮಯ್ಯನವರ ಅಹಿಂದ ಮತ ಬ್ಯಾಂಕ್‌ ಒಡೆಯುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಇದರಲ್ಲಿ ಯಾರು ಗೆಲ್ಲುವರೋ, ಖಾವಿಧಾರಿಗಳು ಖಾಕಿಧಾರಿಗಳ ನಡುವಿನ ಈ ಮೈತ್ರಿಯಿಂದ ರಾಜ್ಯಕ್ಕೇನು ಉಪಯೋಗ ಕಾದು ನೋಡಬೇಕಿದೆ. ಸದ್ಯಕ್ಕೆ ಯಾವ ಯಾವ ಸ್ವಾಮೀಜಿಗಳು ಚುನಾವಣೆ ಬಗ್ಗೆ ಆಸಕ್ತಿ ತೋರಿದ್ದಾರೆ? ಸ್ಪರ್ಧೆ ಬಗ್ಗೆ ಏನು ಹೇಳಿದ್ದಾರೆ.
ಕಣಕ್ಕಿಳಿಯಲು ಆಸಕ್ತಿ ತೋರಿದವರು ಯಾರು?
* ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ
* ಮಾದರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ
* ಧಾರವಾಡದ ಗುರು ಬಸವ ಮಹಾ ಮನೆಯ ಬಸವಾನಂದ ಸ್ವಾಮೀಜಿ
* ಮಂಡ್ಯ ಜಿಲ್ಲೆಯ ಮೇಲುಕೋಟೆಯ ದೇವಿ ಗ್ರಾಮದ ಮಾರ್ಕಂಡೇಶ್ವರ
* ಮಹಾಂತ ಶಿವಯೋಗಿ ಮಠದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ
* ಬಾಗಲ ಕೋಟೆಯ ರಾಮರುದ್ರ ಸ್ವಾಮೀಜಿ
* ಹಾವೇರಿಯ ಶರಣ ಬಸವೇಶ್ವರ ಮಠದ ಪ್ರಣವನಂದ ಸ್ವಾಮೀಜಿ

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜಶೇಖರಾನಂದ ಸ್ವಾಮೀಜಿ :

ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರು ಚುನಾವಣೆ ಅಖಾಡಕ್ಕೆ ಇಳಿಯಲು ಉತ್ಸುಕರಾಗಿದ್ದಾರೆ. ಸ್ವಾಮೀಜಿಗಳಿಗೆ ಅರೆಸ್ಸೆಸ್ ಹಾಗೂ ಬಿಜೆಪಿ ಮುಖಂಡರ ಬೆಂಬಲ ಸಿಕ್ಕಿದೆ. ಹಿಂದೂತ್ವವನ್ನು ಮುಂದಿಟ್ಟುಕೊಂಡು ಕರಾವಳಿಯ ಯಾವುದಾದರೂ ಒಂದು ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸುವುದಾಗಿ ಸ್ವಾಮೀಜಿ ಘೋಷಿಸಿದ್ದಾರೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ನಮ್ಮ ಪ್ರಯತ್ನಕ್ಕೆ ಫಲ ಸಿಗುವ ನಿರೀಕ್ಷೆಯಿದೆ. ಉತ್ತರಪ್ರದೇಶಕ್ಕೆ ತೆರಳಿ ಅಧ್ಯಯನ ನಡೆಸಲಾಗುವುದು, ಯೋಗಿ ಆದಿತ್ಯಾನಾಥ್ ಅವರು ಉತ್ತರಪ್ರದೇಶದಲ್ಲಿ ಅಧಿಕಾರ ಸ್ವೀಕರಿಸಿ ಮಾದರಿಯಾಗಿದ್ದಾರೆ.

 

ಖ್ಯಾತ ಗಾಯಕ ವಿದ್ಯಾಭೂಷಣ :

ಈ ಬಾರಿ ಸಿಎಂ ಸಿದ್ದರಾಮಯ್ಯ ವರುಣಾ ಬದಲು ಚಾಮುಂಡೇಶ್ವರಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಾರೆ. ಸಿದ್ದರಾಮಯ್ಯ ಅವರ ವಿರುದ್ಧ ಡಾ. ವಿದ್ಯಾಭೂಷಣರನ್ನು ಕಣಕ್ಕಿಳಿಸಲು ಬಿಜೆಪಿ ರಣತಂತ್ರ ಹೆಣೆದಿದೆ ಎಂಬ ಸುದ್ದಿ ಹಬ್ಬಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ವಿದ್ಯಾಭೂಷಣ, ‘ನಾನು ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಇದೊಂದು ಶುದ್ಧ ಸುಳ್ಳು ಹಾಗೂ ನನ್ನ ಮೇಲೆ ಅಪಪ್ರಚಾರ ಮಾಡುತ್ತಿರುವ ಮಾತುಗಳು’ ಎಂದಿದ್ದಾರೆ. ಒಂದು ಕಾಲದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮಠಾಧೀಶರಾಗಿದ್ದ ಇವರು ಸದ್ಯ ಗೃಹಸ್ಥಾಶ್ರಮದಲ್ಲಿದ್ದಾರೆ. ಅಲ್ಲದೆ ಉಡುಪಿ ಅಷ್ಟಮಠಗಳು ಸೇರಿದಂತೆ ರಾಜ್ಯದ ಪ್ರಮುಖ ಮಠಗಳ ಸ್ವಾಮೀಜಿಗಳ ಜತೆ ಉತ್ತಮ ಸಂಬಂಧ ಹೊಂದಿದ್ದಾರೆ.

Leave a Response