ಬೆಂಗಳೂರು: ಯೋಧರ ಮೇಲೆ ದಾಳಿ ನಡೆಸಿ ಉಗ್ರರು ಬಹುದೊಡ್ಡ ತಪ್ಪು ಮಾಡಿದ್ದಾರೆ. ಉಗ್ರರಿಗೆ ತಕ್ಕ ಪಾಠ ಕಲಿಸದೆ ಬಿಡುವುದಿಲ್ಲ. ಯೋಧರ ಮೇಲಿನ ದಾಳಿಯಿಂದ ತೀವ್ರ ದುಖಃವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಉಗ್ರರನ್ನು ಸೆದೆ ಬಡೆಯಲು ಸೇನೆಗೆ ಸಂಪೂರ್ಣ ಸ್ವಾತಂತ್ರ ನೀಡಲಾಗಿದೆ. ಉಗ್ರರ ದಮನಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದ್ದೇವೆ. ಯೋಧರ ತ್ಯಾಗ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಇಂತಹ ಅಟ್ಟಹಾಸದಿಂದ ಸೇನೆ ಎದೆಗುಂದುವುದಿಲ್ಲ ಎಂದರು.
ನಾವು ಯುದ್ದಕ್ಕೆ ಸನ್ನದ್ದರಾಗಿದ್ದು, ಉಗ್ರರು ಮಾಡಿದ ತಪ್ಪಿಗೆ ದೊಡ್ಡ ಬೆಲೆ ತೆರಬೇಕಾಗುತ್ತದೆ. ಯೋಧರ ಶೌರ್ಯದ ಮೇಲೆ ನಮಗೆ ನಂಬಿಕೆಯಿದೆ. ನಾವು ಉಗ್ರರಿಗೆ ಕಲಿಸುವ ಪಾಠದ ದ್ವನಿ ಇಡೀ ಜಗತ್ತಿಗೆ ಕೇಳಿಸಬೇಕಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನ ನಮ್ಮ ಮೇಲೆ ನಿರಂತರ ದಾಳಿ ನಡೆಸುತ್ತಿದೆ. ಈ ದಾಳಿಗಳಿಂದ ತಮ್ಮ ಕನಸು ನನಸ್ಸಾಗುತ್ತದೆ ಎಂದರೆ
ಅದು ಅವರ ಮೂಖರ್ತನ. ಉಗ್ರರ ಕೃತ್ಯಕ್ಕೆ ಶೀಘ್ರದಲ್ಲೇ ತಕ್ಕ ಶಿಕ್ಷೆ ಆಗಲಿದೆ ಎಂದು ಭರವಸೆ ನೀಡಿದ್ದಾರೆ.
ಹುತಾತ್ಮ ಯೋಧರ ಕುಟುಂಬ ಸದಸ್ಯರಿಗೆ ಇಡೀ ದೇಶ ಹೆಗಲು ನೀಡುತ್ತದೆ, ಗಾಯಗೊಂಡ ಯೋಧರು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುವುದಾಗಿ ಇದೇ ವೇಳೆ ಪ್ರಧಾನಿ ಮೋದಿ ಹೇಳಿದ್ದಾರೆ.