ಕಲ್ಲಡ್ಕ: ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಸೈನಿಕರ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಹತ್ಯೆಯನ್ನು ಖಂಡಿಸಿ, ಮಡಿದ ವೀರ ಯೋಧರಿಗೆ ಕಲ್ಲಡ್ಕ ಶ್ರೀರಾಮ ಮಂದಿರದ ರಾಜ ಗೋಪುರದ ಮುಂದುಗಡೆ ದೀಪ ಪ್ರಜ್ವಲಿಸಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು ನುಡಿನಮನ ಸಲ್ಲಿಸಿ ಡಾಕ್ಟರ್ ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡಿದರು.
ನಮಗೆಲ್ಲ ಸವಾಲಿನ ದಿನ ಬಂದಿದೆ ಮನುಷ್ಯ ಬದುಕಲು ಅಸಾಧ್ಯವಾದ ಜಾಗದಲ್ಲಿ ದೇವ ಸ್ವರೂಪಿಗಳಾದ ಸೈನಿಕರನ್ನು ರಾಕ್ಷಸರು ಮೋಸದಲ್ಲಿ ಕೊಂದರು.
1947 ರಲ್ಲಿ ದೇಶ ವಿಭಜನೆಯ ಘಟನೆಯಿಂದಾಗಿ ನಾವು ಇಂದು ಈ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದೇವೆ. ಈ ದೇಶವನ್ನು ನಾಶ ಮಾಡಬೇಕು ಎಂಬ ಪ್ರಯತ್ನ, ಅಲ್ಲಿನ ರಾಜ್ಯದಲ್ಲಿ ಬಹುತೇಕ ಜನ ಉಗ್ರಗಾಮಿಗಳಿಗೆ ಬೆಂಬಲ ಕೊಡುವವರಿದ್ದಾರೆ.
ಆದ್ದರಿಂದ ಇಂತಹ ಘಟನೆಗಳು ನಡೆಯುತ್ತದೆ ಎಲ್ಲಿಯವರೆಗೂ ಪಾಕಿಸ್ತಾನ ಇರುತ್ತದೆ ಅಲ್ಲಿಯವರೆಗೆ ಇಂತಹ ಸಮಸ್ಯೆಗಳು ನಡೆಯುತ್ತಲೇ ಇರುತ್ತದೆ ಎಂದು ಪಾಕಿಸ್ತಾನದ ವಿರುದ್ಧ ಕಿಡಿ ಕಾರಿದರು.