ಉಗ್ರರ ದಾಳಿ ಖಂಡಿಸಿ ಉಪ್ಪಿನಂಗಡಿಯಲ್ಲಿ ಸರ್ಜಿಕಲ್ ಸ್ಟ್ರೈಕ್ಗಾಗಿ ಆಗ್ರಹಿಸಿ ಪ್ರತಿಭಟನೆಗೆ ಕರೆ – ಕಹಳೆ ನ್ಯೂಸ್
ಉಪ್ಪಿನಂಗಡಿ: ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಸೈನಿಕರ ಮೇಲೆ ನಡೆದ ಉಗ್ರರ ದಾಳಿಯನ್ನು ಖಂಡಿಸಿ, ಹುತಾತ್ಮರಾದ 44 ವೀರ ಸೈನಿಕರ ಶೃದ್ದಾಂಜಲಿಯೊಂದಿಗೆ ಉಗ್ರರ ವಿರುದ್ಧ ಇನ್ನೊಂದು ಸರ್ಜಿಕಲ್ ಸ್ಟ್ರೈಕ್ಗಾಗಿ ಆಗ್ರಹಿಸಿ, ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದೆ.
ಒಂದಷ್ಟು ಕಂಬನಿ, ಒಂದಷ್ಟು ಆಕ್ರೋಶ, ಹುತಾತ್ಮ ಯೋಧರ ಸ್ಮರಣಾರ್ಥ ಮೇಣದ ಬತ್ತಿಯೊಂದಿಗೆ ಸೇರೋಣ. ದೇಶದ ಸೈನಿಕರ, ರಾಷ್ಟ್ರದ ನಾಯಕನ ಜೊತೆ ನಾವಿದ್ದೇವೆಂದು ಸಾರೋಣ. ಉಪ್ಪಿನಂಗಡಿಯ ಎಲ್ಲಾ ರಾಷ್ಟ್ರಭಕ್ತ ಬಂಧುಗಳು ತಪ್ಪದೇ ಭಾಗಿಯಾಗೋಣ.