ಪುತ್ತೂರು: ವಿವೇಕಾನಂದ ಕಾಲೇಜು ಆವರಣದಲ್ಲಿ ಇರುವ ನಿವೇದಿತಾ ಶಿಶು ಮಂದಿರದಲ್ಲಿ ಪ್ರತಿಭೋತ್ಸವ ನಡೆಯಿತು. ಮುಖ್ಯ ಅತಿಥಿಗಳಾಗಿ ಶ್ರೀಮತಿ ರೂಪಕಲಾ ಶ್ರೀ ರಾಮ ಶಾಲಾ ಪ್ರಾಥಮಿಕ ಮಾತಾಜಿ ಹಾಗೂ ಅಧ್ಯಕ್ಷರಾಗಿ ಪ್ರಸನ್ನ ಎನ್ ಭಟ್ ಇವರುಗಳು ಭಾಗವಹಿಸಿರುತ್ತಾರೆ. ಭಾರತ ಮಾತೆಗೆ ಪುಷ್ಪಾರ್ಚನೆ ಗೈದು ದೀಪ ಬೆಳಗಿಸಿ. ನಮ್ಮ ಶಿಶುಮಂದಿರದ ಅಧ್ಯಕ್ಷರು ಅತಿಥಿಗಳು ಹಾಗೂ ಸಭಾಧ್ಯಕ್ಷರನ್ನು ವೇದಿಕೆಗೆ ಕರೆತರುವುದರ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು.
ಶಿಶುಮಂದಿರದ ಪುಟಾಣಿಗಳಿಂದ ಸರ್ವಜ್ಞನ ವಚನ, ಅಮೃತ ಬಿಂದು, ಅಮೃತ ವಚನ, ಪ್ರಾರ್ಥನೆ ಇತ್ಯಾದಿ ನಡೆಯಿತು. ಶಿಶುಮಂದಿರದ ಅಧ್ಯಕ್ಷರಾದ ಶ್ರೀಯುತ ರಘುನಾಥ ಬಿ ಇವರು ಬಂದಂತಹ ಅತಿಥಿಗಳನ್ನು ಹಾಗೂ ಅಧ್ಯಕ್ಷರನ್ನು ಸ್ವಾಗತಿಸಿ ಪರಿಚಯಿಸಲಾಯಿತು.
ನಂತರ ಮುಖ್ಯ ಅತಿಥಿಗಳು ಮಾತನಾಡಿ ನಮ್ಮ ಸಂಸ್ಕೃತಿ ಸಂಸ್ಕಾರಗಳ, ಶಿಕ್ಷಣ ಶಿಶುಮಂದಿರಗಳಿಂದಲೇ ದೊರೆಯುವುದು ಎಂದು ನುಡಿದರು. ಅಧ್ಯಕ್ಷರಾದ ಶ್ರೀ ಪ್ರಸನ್ನ ಎನ್ ಭಟ್ ಮಾತನಾಡಿ ಮನುಷ್ಯ ಎಷ್ಟೇ ದೊಡ್ಡವನಾದರೂ ಸಂಸ್ಕಾರಯುತ ಶಿಕ್ಷಣದಿಂದ ಉತ್ತಮ ಜೀವನ ಸಾಧ್ಯ ಎಂದು ನುಡಿದರು.
ನಂತರ ಶಿಶುಮಂದಿರದ ಖಜಾಂಚಿ ಶ್ರೀಯುತ ರಾಧ್ಯೆಶ್ಯಾಂ ಕೆ ವರದಿ ವಾಚಿಸಿದರು. ಶ್ರೀಯುತ ಶ್ರೀಧರ ಕುಂಬಾರು ವಂದಿಸದರು. ಶ್ರೀಮತಿ ಭಾರತಿ ಶಶಿಧರ್, ಶ್ರೀಮತಿ ಲಕ್ಷ್ಮೀ ವಿ.ಜಿ ಭಟ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮ ಮುಕ್ತಾಯಗೊಂಡಿತು. ನಂತರ ಪುಟಾಣಿಗಳಿಂದ, ಮಾತೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಈ ಎಲ್ಲಾ ಕಾರ್ಯಕ್ರಮದ ಯಶಸ್ಸಿಗೆ ಆಡಳಿತ ಮಂಡಳಿಯವರು, ಪೋಷಕರು, ಮಾತಾಜಿ ಹಾಗೂ ಶಿಶುಮಂದಿರದ ಸಹಾಯಕಿ ಸಹಕರಿಸಿರುತ್ತಾರೆ.