ಹೈಶ-ಎ-ಮೊಹಮ್ಮದ’ ಈ ಸಂಘಟನೆಯು ಪ್ರೆಬ್ರವರಿ 14 ರಂದು ಜಮ್ಮು -ಕಾಶ್ಮೀರ ಪುಲವಾಮಾ ಜಿಲ್ಲೆಯಲ್ಲಿ ಕೇಂದ್ರೀಯ ಮೀಸಲು ಪೋಲಿಸ್ ಪಡೆಯ ಸೈನಿಕರ ಮೇಲೆ ಹೇಡಿಯಂತೆ ದಾಳಿ ನಡೆಯಿತು.
ಈ ಮೊದಲು ಉರಿಯಲ್ಲಿ ಭಯೋತ್ಪಾದಕರು ಮಾಡಿದ ದಾಳಿಯ ನಂತರ ಭಾರತವು ಪಾಕಿಸ್ತಾನಕ್ಕೆ ಪಾಠ ಕಲಿಸಲು ಸಪ್ಟೆಂಬರ್ 2018 ರಲ್ಲಿ ‘ಸರ್ಜಿಕಲ್ ಸ್ರೈಕ್’ ಮಾಡಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ನೆಲೆಯನ್ನು ಧ್ವಂಸ ಮಾಡಿತು. ಅನಂತರವೂ ಪಾಕಿಸ್ತಾನದ ವರ್ತನೆಯಲ್ಲಿ ಯಾವುದೇ ಬದಲಾವಣೆಯಾಗದಿರುವುದನ್ನು ಸತತ ಉಗ್ರವಾದಿಗಳ ಮಾಧ್ಯಮದಿಂದ ಸೈನಿಕರನ್ನು ಬಲಿ ತೆಗೆದುಕೊಳ್ಳುತ್ತಿದೆ.
ಉಗ್ರರು ಮತ್ತು ಪಾಕಿಸ್ತಾನದ ಸೈನಿಕರು ಭಾರತೀಯ ಸೈನಿಕರ ಹತ್ಯೆ ಮಾಡುವುದು ಇದು ಪಾಕಿಸ್ತಾನದ ಅಘೋಷಿತ ಯುಧ್ದದ ಒಂದು ಭಾಗವಾಗಿದೆ. ಈ ರೀತಿ ದೇಶದ ಸಾರ್ವಭೌಮತೆಗೆ ಸವಾಲೆಸಗುವ ಮತ್ತು ಜಗತ್ತಿನಾದ್ಯಂತ ದೇಶದ ಅಪಹಾಸ್ಯವನ್ನು ಮಾಡುವ ಪಾಕಿಸ್ತಾನದ ಪ್ರಯತ್ನವನ್ನು ಭಾರತೀಯ ರಾಜಕಾರಣಿಗಳು ತಕ್ಷಣವೇ ಹೊಡದುರುಳಿಸುವುದು ಅವಶ್ಯಕವಿದೆ.
ಭಾರತೀಯ ರಾಜಕಾರಣಿಗಳು ಇನ್ನೆಷ್ಟು ಸೈನಿಕರು ಹುತಾತ್ಮರಾದ ಮೇಲೆ ಎಚ್ಚರಗೊಳ್ಳುವರು? ಕೇವಲ ರಾಜಕೀಯ ನಿರ್ಣಯದ ಅಭಾವದಿಂದ ಸೈನಿಕರು ಶತ್ರು ರಾಷ್ಟ್ರಗಳಿಂದ ಬಲಿಯಾಗುತ್ತಿದ್ದರೆ ಮುಂಬರುವ ಕಾಲದಲ್ಲಿ ಸೈನಿಕರೊಂದಿಗೆ ದೇಶಾದ್ಯಂತ ಅಸ್ಥಿರ ವಾತಾವರಣ ನಿರ್ಮಾಣವಾಗಲು ಸಮಯ ಬೇಕಾಗುವುದಿಲ್ಲ.
ಆದ್ದರಿಂದ ಕೇಂದ್ರ ಸರ್ಕಾರವು ಜನರ ಭಾವನೆಯನ್ನು ಗಮನದಲ್ಲಿಟ್ಟುಕೊಂಡು ಭಯೋತ್ಪಾದಕರ ನಿರ್ಮಿತಿಯ ಕೇಂದ್ರವಾದ ಪಾಕ್ ವಿರುದ್ಧ ಕೂಡಲೇ ಕ್ರಮವನ್ನು ಕೈಗೊಂಡು ಅದನ್ನು ಸರ್ವನಾಶ ಮಾಡಬೇಕು.ಅದೇರೀತಿ ಕಾಶ್ಮೀರದಲ್ಲಿಯ ಪ್ರತ್ಯೇಕವಾದಿಗಳಿಗೆ ನೀಡಿದ ರಕ್ಷಣೆಯನ್ನು ಹಿಂಪಡೆದು ಅವರನ್ನು ಇತರ ರಾಜ್ಯಗಳಲ್ಲಿನ ಸೆರೆಮನೆಯಲ್ಲಿ ಕೂಡಿಹಾಕಬೇಕು.ಎಂದು ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಕರಾದ ಶ್ರೀ.ಚಂದ್ರಮೊಗೇರ್ ಇವರು ಆಗ್ರಹಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಪುತ್ತೂರಿನ ಮಿನಿವಿಧಾನ ಸೌಧದಲ್ಲಿರುವ ಸಹಾಯಕ ಕಮೀಷನರ್ ಗಳಿಗೆ ಮನವಿಯನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಧರ್ಮ ಪ್ರೇಮಿಗಳಾದ ಶ್ರೀ.ಲಕ್ಷಣ ಗೌಡ ಬೆಳ್ಳಿಪ್ಪಾಡಿ, ಶ್ರೀ.ಸತೀಶ್ ಬಂಡಾರಿ ನೆಲ್ಲಿಕಟ್ಟೆ , ಶ್ರೀ.ಐತ್ತಪ್ಪ ಕೊಡಿಪಾಡಿ, ಶ್ರೀ.ಕೃಷ್ಣ ಕುಮಾರ್ ಶರ್ಮ, ಶ್ರೀ. ಚಂದ್ರಶೇಖರ, ಶ್ರೀ. ದಯಾನಂದ, ನಾಗೇಶ್ ಸೌ. ವಂದನಾ ಉಪಸ್ಥಿತಿತರಿದ್ದರು.