ಗೂಗಲ್ ಸರ್ಚ್‍ನಲ್ಲಿ ವಿಶ್ವದ ಅತ್ಯುತ್ತಮ ಟಾಯ್ಲೆಟ್ ಪೇಪರ್ ಯಾವುದು ಎಂದು ಹುಡುಕಿದರೆ ಪಾಕಿಸ್ತಾನದ ಧ್ವಜ ಕಾಣಸಿಗುತ್ತಿದೆ. ಪುಲ್ವಾಮ ಭಯೋತ್ಪಾದನೆ ದಾಳಿ ನಂತರಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಭಾರತೀಯರು, ಇದನ್ನು ಹಾಸ್ಯಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನದ ಬಗ್ಗೆ ಹೊಸ ಟ್ರೆಂಡ್ ಶುರುವಾಗಿದೆ. ಗೂಗಲ್ ನಲ್ಲಿ ವಿಶ್ವದ ಬೆಸ್ಟ್ ಟಾಯ್ಲೆಟ್ ಪೇಪರ್ ಜಾಗದಲ್ಲಿ ಪಾಕಿಸ್ತಾನದ ಧ್ವಜ ಕಾಣ್ತಿದೆ. ಅದ್ರ ಸ್ಕ್ರೀನ್ ಶಾಟ್ ತೆಗೆದ ಜನರು ಸಾಮಾಜಿಕ ಜಾಲತಾಣದಲ್ಲಿ ಹಾಕ್ತಿದ್ದಾರೆ. ಪುಲ್ವಾಮ ದಾಳಿ ನಡೆದು ಎರಡು ದಿನಗಳ ನಂತರ ಈ ಫೋಟೋ ವೈರಲ್ ಆಗಿದೆ.