Recent Posts

Sunday, January 19, 2025
ಸುದ್ದಿ

ಯೋಧರ ಸಾವಿನಲ್ಲೂ ವಿಕೃತಿ ಮೆರೆದ ಪಾಕ್ ಮಾಧ್ಯಮಗಳು – ಕಹಳೆ ನ್ಯೂಸ್

ಜಮ್ಮು ಕಾಶ್ಮೀರ: ಪುಲ್ವಾಮದ ಅವಂತಿಪೋರಾದಲ್ಲಿ ನಡೆದ ಉಗ್ರ ದಾಳಿಯಲ್ಲಿ 42 ಮಂದಿ ಸಿ.ಆರ್.ಪಿ.ಎಫ್. ಯೋಧರು ಹುತಾತ್ಮರಾಗಿದ್ದು, ವೀರ ಮರಣವನ್ನಪ್ಪಿದ ಯೋಧರಿಗಾಗಿ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಈ ಕೃತ್ಯವನ್ನು ಪಾಕ್ ಪ್ರೇರಿತ ಉಗ್ರರು ಎಸಗಿರುವುದು ಈಗಾಗಲೇ ಖಚಿತವಾಗಿದ್ದು, ಭಾರತ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ರವಾನಿಸಿದೆ.

ಪಾಕಿಸ್ತಾನ ಹಾಗೂ ಚೀನಾ ಹೊರತುಪಡಿಸಿ ವಿಶ್ವದ ಎಲ್ಲಾ ರಾಷ್ಟ್ರಗಳು ಭಾರತವನ್ನು ಬೆಂಬಲಿಸಿದ್ದು, ಉಗ್ರ ಕೃತ್ಯಕ್ಕೆ ಖಂಡನೆ ವ್ಯಕ್ತವಾಗಿದೆ. ಈ ದಾಳಿಯನ್ನು ಪಾಕಿಸ್ತಾನದ ಮಾಧ್ಯಮಗಳು ವಿಕೃತ ರೀತಿಯಲ್ಲಿ ವರದಿ ಮಾಡಿರುವುದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲಿನ ಪ್ರಮುಖ ಪತ್ರಿಕೆಗಳು, ಉಗ್ರ ಕೃತ್ಯವನ್ನು ಸ್ವಾತಂತ್ರ್ಯ ಹೋರಾಟಗಾರನಿಂದ ನಡೆದ ದಾಳಿ ಎಂಬಂತೆ ಬಿಂಬಿಸಿವೆ. ಅಲ್ಲದೆ ಆತ್ಮಾಹುತಿ ದಾಳಿ ನಡೆಸಿದ ಅಬಿದ್‍ನನ್ನು ಸ್ವಾತಂತ್ರ್ಯ ಯೋಧ ಎಂದು ಪ್ರಶಂಸಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು