Sunday, January 19, 2025
ಸುದ್ದಿ

ವಿವೇಕಾನಂದ ಕಾಲೇಜಿನಲ್ಲಿ ವಾಣಿಜ್ಯ ಸ್ಪರ್ಧೆ ಉದ್ಘಾಟನೆ – ಕಹಳೆ ನ್ಯೂಸ್

ಪುತ್ತೂರು: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆ ಅಡಗಿರುತ್ತದೆ ಸೂಕ್ತ ವೇದಿಕೆ ದೊರೆತಾಗಲಷ್ಟೆ ಅದನ್ನು ಪ್ರದರ್ಶಿಸಬಹುದು. ಕಲಿಕೆಯೊಂದಿಗೆ ಪಠ್ಯೇತ್ಯರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮುಂದಿನ ವೃತ್ತಿ ಜೀವನಕ್ಕೆ ಕ್ಷಮತೆ ದೊರಕುತ್ತದೆ ಎಂದು ವಿವೇಕಾನಂದ ಮಹವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ ಪೈ ಹೇಳಿದರು.

ಅವರು ವಿವೇಕಾನಂದ ಕಾಲೇಜಿನ ವಾಣಿಜ್ಯ ಮತ್ತು ಆಡಳಿತ ವ್ಯವಹಾರ ನಿರ್ವಹಣಾ ವಿಭಾಗದಿಂದ ಅಯೋಜನೆಗೊಂಡ ಆಂತರಿಕ ವಾಣಿಜ್ಯ ಸ್ಪರ್ಧೆ-2019 ನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಎಮ್.ಟಿ ಜಯರಾಮ ಭಟ್ ಅತಿಥಿಯಾಗಿ ಆಗಮಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ವಹಿಸಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ವೆಂಕಟರಮಣ ಭಟ್ ಪ್ರಸ್ಥಾವಿಸಿದರು. ಆಡಳಿತ ವ್ಯವಹಾರ ನಿರ್ವಹಣೆ ಸಂಘಟನೆಯ ವಿದ್ಯಾರ್ಥಿ ಅಧ್ಯಕ್ಷ ರಮಾನಂದ ಸ್ವಾಗತಿಸಿ, ವಾಣಿಜ್ಯ ಸಂಘದ ಜತೆ ಕಾರ್ಯದರ್ಶಿ ಚೈತ್ರ ವಂದಿಸಿದರು. ವಿದ್ಯಾರ್ಥಿ ಶ್ರೀಕಾಂತ್ ಕಾರ್ಯಕ್ರಮ ನಿರ್ವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು