Sunday, January 19, 2025
ಅಂಕಣ

ಚೆಲ್ಲಿದ ರಕ್ತಕ್ಕೆ ಉಗ್ರರ ಮಟ್ಟವೊಂದೇ ತಿರುಗೇಟಿನ ಮಂತ್ರ

ಸಿಂಹವನ್ನ ಸದಾ ಕೆದಕುತ್ತಾ ಇದ್ದರು ಸುಮ್ಮನೆ ಮಲಗಿದೆ ಅಂದರೆ ಅದಕ್ಕೆ ಭೇಟೆಯಾಡೋ ತಾಕತ್ತಿಲ್ಲ ಅಂತಲ್ಲ, ಹಾಗಂತ ಅಂದುಕೊಂಡರೆ ಅದಕ್ಕಿಂತ ಮುಠ್ಠಾಳ ಇನ್ನೊಬ್ಬನಿರೋದಿಲ್ಲ, ಎಲ್ಲವನ್ನು ಸಹಿಸಿಕೊಂಡು ಮುಷ್ಠಿ ಬಿಗಿ ಹಿಡಿದು ಒಮ್ಮೆಲೆ ಎದ್ದು ನಿಂತರೆ ಹಿಂಡೆ ಹಿಪ್ಪೆಯಾಗಿಸೋ ತಾಕಾತ್ತು ಈ ಸಿಂಹಕ್ಕಿದೆ. ಹಾಗೇ ನಮ್ಮ ಭಾರತಾಂಬೆಯ ಪುಣ್ಯದ ನೆಲದಲ್ಲಿ ಉಗ್ರರು ಅಟ್ಟಹಾಸ ಮೆರೆದರು, ಭಾರತ ಸುಮ್ಮನಿದೆ ಅಂದುಕೊಂಡು ಕಾಲು ಕೆರೆದುಕೊಂಡು ನಮ್ಮ ವೀರಸಿಂಹಗಳು ಸುದ್ದಿಗೆ ಬಂದರೆ ಉಗ್ರರ ಹೊಟ್ಟೆ ಬಗೆದು ಕರಳು ತೆಗೆದು ಕೊರಳಿಗೆ ಹಾರ ಹಾಕಿಕೊಳ್ಳೋ ತಾಕತ್ತು ಭಾರತಕ್ಕಿದೆ.

ನಮ್ಮ ಒಬ್ಬ ಯೋಧನ ಒಂದು ಹನಿ ನೆತ್ತರು ನೆಲಕ್ಕೆ ಬಿದ್ದರೂ ನಾವು ಸಹಿಸೋದಿಲ್ಲ, ಹಾಗಿರಬೇಕಾದರೆ 44ಕ್ಕೂ ಹೆಚ್ಚು ಕೆಚ್ಚೆದೆಯ ವೀರರ ಮಾರಣಹೋಮವೇ ನಡೆದಾಗ ತಡೆದುಕೊಂಡು ಸುಮ್ಮನಾಗುತ್ತೇವಾ? ಪ್ರತಿಯೊಬ್ಬ ಭಾರತೀಯನ ರಕ್ತ ಕೊತ ಕೊತ ಕುದಿಯುತ್ತಿದೆ, ಸೇಡಿನ ಜ್ವಾಲೆ ರೋಷಾಗ್ನಿಯಾಗಿ ಹೊರಹೊಮ್ಮುತ್ತಿದೆ..

ಜಾಹೀರಾತು
ಜಾಹೀರಾತು
ಜಾಹೀರಾತು

ನಮ್ಮದೇ ಗಡಿಗೆ ನುಗ್ಗಿ ಕಾವಾಲಾಗಿದ್ದ ಕೆಚ್ಚೆದೆಯ ಯೋಧರನ್ನ ಹೇಡಿಯಂತೆ ಮೋಸದಿಂದ ಬಲಿ ಪಡೆದ ಮಾತ್ರಕ್ಕೆ ಪಾಪಿ ಪಾಕಿಸ್ತಾನವು ದೇಶಾಭಿಮಾನ ತೋರಲು ಹೇಗೆ ಸಾಧ್ಯಾ..? ಹೆತ್ತ ತಾಯಿಯ ಹಾಲುಂಡು ಬೆಳೆದ ಯಾವ ಮನುಷ್ಯನೂ ಇಂತಹ ಹೇಯ ಕೆಲಸವನ್ನು ಮಾಡಲಾರ.
ಯುದ್ಧ ಅಂತ ಬಂದ್ರೆ ಭಾರತಕ್ಕು ಎದ್ದು ನಿಲ್ಲೋ ಎಲ್ಲ್ಲಾ ತಾಕತ್ತು ಇದೆ. ಆದ್ರೆ ಭಾರತ ನೀಡೋ ಪ್ರತಿಯೊಂದು ಏಟನ್ನು ಸ್ವೀಕರಿಸೋ ತಾಕತ್ತು ನಿನಗಿದ್ಯಾ ಅನ್ನೊದನ್ನ ಮೊದಲು ನೋಡಿಕೋ. ಯುದ್ಧಕ್ಕೋ ಒಂದು ನೀತಿ ನಿಯಮ ಅನ್ನೋದಿದೆ. ನಮ್ಮ ಪುಣ್ಯ ನೆಲದಲ್ಲಿ ಶತ್ರು ಪಾಳಯದ ಮೃತದೇಹ ಸಿಕ್ಕರು ಅದನ್ನು ಗೌರವಿಸುವ ನೈಪುಣ್ಯತೆ ನಮಗಿದೆ, ಆದ್ರೆ ಈ ಯುದ್ಧ ಧರ್ಮವನ್ನ ಪಾಪಿಗಳಿಗೆ ಹೇಳಹೋದರೆ ಅದು ರಕ್ಕಸರಿಗೆ ಜೋಗುಳ ಹಾಡಿದಂತೆ ಸರಿ. ಪಾಪಿಗಳು ತಮ್ಮ ಬುದ್ಧಿಯನ್ನ ಬಿಟ್ಟಾರೆ??

ಜಾಹೀರಾತು
ಜಾಹೀರಾತು
ಜಾಹೀರಾತು

ಪಾಪಿ ಉಗ್ರನ ಅಟ್ಟಹಾಸವನ್ನ ಯಾವ ಕಾರಣಕ್ಕೂ ಮರೆಯುವಂತಿಲ್ಲ. ಇತಿಹಾಸದ ಪುಟಗಳಲ್ಲಿ ಹೆಪ್ಪುಗಟ್ಟಿದ ನೆತ್ತರ ಕಲೆಯಾಗಿ ಬಿಟ್ಟಿದೆ. ಇದಕ್ಕೆ ತಕ್ಕ ಪ್ರತಿಕಾರವಾಗಲೇಬೇಕು. ಪಾಕಿಗೆ ಕೊಟ್ಟ ಏಟಿಗೆ ‘ಅಯ್ಯೋ ಯಾಕಾದ್ರು ಭಾರತದ ತಂಟೆಗೆ ಹೋದೆವೋ’ ಎಂದು ನರಳಿ ನರಳಿ ಸಾಯಬೇಕು. ನರಸತ್ತ ರಾಕ್ಷಸರಿಗಿನ್ನು ಉಳಿಗಾಲವಿಲ್ಲ, ಗಡಿಯೊಳಗೆ ಇರೋ ನಮ್ಮ ರಕ್ತವೇ ಕುದಿಯುತ್ತಿರಬೇಕಾದರೇ ಗಡಿಯಲ್ಲಿ ಬಂದೂಕು ಹಿಡಿದ ಪ್ರತಿಯೊಬ್ಬ ಯೋಧನ ರಕ್ತ ಹೇಗಾಗಿರಬೇಡ..! ಗೆಳೆಯನನ್ನು ಕಳೆದುಕೊಂಡು ನೋವು, ಛಿದ್ರ ಛಿದ್ರವಾದ ದೇಹಗಳಲ್ಲಿ ಇದು ಯಾರ ದೇಹ ಎಂದು ಗುರುತಿಸುವ ಕಾರ್ಯ ನಿಜಕ್ಕೂ ಮನಕಲುಕುತ್ತೆ. ಇವೆಲ್ಲ ನೋವನ್ನ ನೆನೆದು ಅತ್ತುಕೊಂಡು ಕೂರುವ ಹಾಗಿಲ್ಲ.. ಬಂದೂಕು ಹಿಡಿದು ಶತ್ರುಗಳ ರಕ್ತ ಚೆಲ್ಲಲು ಎದ್ದು ನಿಲ್ಲಲೇಬೇಕು.. ನಮ್ಮ ಭಾರತಾಂಬೆಯ ಹೆಮ್ಮೆಯ ಪುತ್ರರು ಕೆಚ್ಚೆದೆಯಿಂದ ಎದ್ದು ನಿಲ್ಲುತ್ತಾರೆ.. ಎಲ್ಲಾ ನೋವನ್ನು ಬಂದೂಕಿನ ಮೂಲಕ ಹೊರ ಹಾಕಿ ಶತ್ರುಗಳ ರುಂಡವನ್ನು ಚೆಲ್ಲಾಡುತ್ತಾರೆ.

ವೀರ ಮರಣವನ್ನಪಿದ ನಮ್ಮ ಯೋಧರನ್ನ ನೆನೆದರೆ ನಮ್ಮ ಕಣ್ಣಿನಲ್ಲಿ ನೆತ್ತರೇ ಹರಿದಂತಾಗುತ್ತೆ. ನಮ್ಮ ಯೋಧರು ನರಳಿದ್ದು ಸಾಕು. ಯುದ್ಧವಾದರೆ ಯುದ್ಧ, ಎಲ್ಲದಕ್ಕೂ ಭಾರತೀಯರು ಸನ್ನದ್ಧವಾಗಿದ್ದಾರೆ. ಪಾಪಿ ಪಾಕಿಗೆ ಭಾರತದ ಶಕ್ತಿ ಏನು ಅನ್ನೊದನ್ನ ತೋರಿಸಬೇಕಾಗಿದೆ. ನಮ್ಮ ಯೋಧರಿಗೆ ಮಾತೃಭೂಮಿಯ ಬಿಸಿ ಅಪ್ಪುಗೆಯ ರುಚಿಯು
ತಿಳಿದಿದೆ, ಬಿಸಿ ರಕ್ತದ ದಾಹವು ತಿಳಿದಿದೆ, ಮುನ್ನುಗ್ಗಬೇಕಾಗಿದೆ ಪಾಪಿ ಪಾಕಿಸ್ತಾನದ ವಿರುದ್ಧ.. ದೇಶ ದ್ರೋಹಿ ರಾಕ್ಷಸರ ವಿರುದ್ದ..
ಹೇ ಪಾಪಿ ಪಾಕಿಸ್ತಾನ್, ಇದು ಪುಣ್ಯ ನೆಲ. ಇಲ್ಲಿ ಎಲ್ಲದಕ್ಕೂ ಒಂದು ಧರ್ಮವಿದೆ. ಮುಟ್ಟಿದ್ದು ನಿನ್ನ ತಪ್ಪು, ತಪ್ಪಿಗೆ ಪ್ರಾಯಶ್ಚಿತವಾಗಲೇ ಬೇಕಾಗಿದೆ.
ವಂದೇ ಮಾತರಂ, ಜೈ ಹಿಂದ್.
ಸುಮಿತ್ರ ನಾಯ್ಕ್