Recent Posts

Sunday, January 19, 2025
ಸುದ್ದಿ

ರಾಮಚಂದ್ರಪುರಾ ಮಠಕ್ಕೊದಗಿದ ವಿಘ್ನಗಳ ನಿವಾರಣೆ ಮಾಡಿದವರು ಯಾರು? | ರಾಘವೇಶ್ವರ ಶ್ರೀಗಳ ಕಟೀಲು, ಮಧೂರು ಮತ್ತು ಕುಕ್ಕೆ ಭೇಟಿ ಹಿನ್ನಲೆ ಏನು ?

ದಕ್ಷಿಣ ಕನ್ನಡ : ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ ಶಿಶ್ಯರ ಮನೆಗಳಲ್ಲಿ ಮೊಕ್ಕಾಂ ಹೂಡಿರುವ ರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಸ್ವಾಮೀಜಿಯವರು ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಪ್ರಸಿದ್ಧ, ಕಾರಣೀಕದ ಮೂರು ಕ್ಷೇತ್ರಗಳನ್ನು ಸಂದರ್ಶಿಸಿ ವಿಶೇಷ ಪೂಜೆ ನೆರವೇರಿಸಿದ್ದಾರೆ.

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಭೇಟಿ :

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀಗಳು ಪುತ್ತೂರಿನಲ್ಲಿ ಭಿಕ್ಷೆ ಪೂರೈಸಿ, ನೇರವಾಗಿ ದೇಶ ವಿದೇಶದಲ್ಲಿ ಅಪಾರ ಭಕ್ತರ ಇಷ್ಟದೇವತೆಯಾದ ಕಟೀಲು ಭ್ರಮರಾಂಭೆಯ ಸನ್ನಿಧಿಗೆ ನವೆಂಬರ್ ಐದರಂದು ಬೇಟಿನೀಡಿದ್ದರು. ಆ ಸಂದರ್ಭದಲ್ಲಿ ಶ್ರೀಗಳನ್ನು ವಿಶೇಷವಾಗಿ ಕ್ಷೇತ್ರದ ಮತ್ತು ಆಡಳಿತ ಮಂಡಳಿಯ ಪರವಾಗಿ ಅಸ್ರಣ್ಣರು ಗೌರವಿಸಿದ್ದರು. ಕಟೀಲು ದೇವಿಗೆ ವಿಶೇಷ ಪೂಜೆಯನ್ನೂ ಆ ಸಂದರ್ಭದ ನೇರವೇರಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಕಾಸರಗೋಡು ಮಧೂರು ಶ್ರೀ ಮದನಂತೇಶ್ವರ ದೇವಸ್ಥಾನಕ್ಕೆ ಭೇಟಿ.

ಜಗತ್ತಿನ ಅತ್ಯಂತ ಪವರ್ಫುಲ್ ದೇವರು ಮಧೂರು ಮಹಾಗಣಪತಿ ಮೊದಲ ಪೂಜೆ ಗಣಪತಿಗೆ, ಅಂತಹ ಪೂಣ್ಯಕ್ಷೇತ್ರಕ್ಕೆ ನವೆಂಬರ್ ಏಳರಂದು ಶ್ರೀಗಳು ಭೇಟಿ ನೀಡಿದ್ದಾರೆ. ಶ್ರೀ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ದರ್ಶನ.

ಇಂದು ಶ್ರೀಗಳು ಜಗದ್ವಿಖ್ಯಾತ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿ, ಆದಿಯ ದೇವನಿಗೆ ವಿಶೇಷ ಪೂಜೆ ನೆರವೇರಿದ್ದಾರೆ.

ಗಮನಿಸಬೇಕಾದ ಅಂಶ : ಮಧೂರು ದೇವಸ್ಥಾನಕ್ಕೆ ಬೇಟಿನೀಡಿದ ಶ್ರೀಗಳು ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ” ಮಧೂರು ಮಹಾಗಣಪತಿಯ ಮಂಗಲದರ್ಶನದ ಮಹಾಯೋಗವಿಂದು; ಮಠಕ್ಕೊದಗಿದ ಮಹಾವಿಘ್ನಗಳನ್ನು ಪರಿಹರಿಸಿದವನಲ್ಲವೇ ಅವನು!? ” ನವೆಂಬರ್ ಏಳರಂದು ರಾತ್ರಿ ಎಂಟು ಐವತ್ತರ ಸಮಯಕ್ಕೆ ಫೋಟೋ ಸಹಿತ ಪೋಷ್ಟ್ ಮಾಡಿರುವುದು ಕಂಡುಬಂದಿದೆ. ಹಾಗೆಯೇ ರಾಮಚಂದ್ರಾಪುರಾ ಮಠದ ಮೇಲಿನ ಸಾಲು ಸಾಲು ಸುಳ್ಳು ಕೇಸುಗಳ ಮತ್ತು ಶ್ರೀಗಳ ಮೇಲೆ ನಡೆದ ವ್ಯವಸ್ಥಿತ ಶಡ್ಯಂತ್ರದಿಂದ ಮಠವನ್ನು ಮತ್ತು ಶ್ರೀಗಳನ್ನು ರಕ್ಷಿಸಿದ್ದು ಈ ಮೂರು ಶಕ್ತಿದೇವತೆಗಳೇ ಎಂಬ ಪ್ರಶ್ನೆ ಈಗ ಮೂಡುತ್ತಿದೆ. ಆ ಎಲ್ಲಾ ದೇವತೆಗಳಿಗೂ ಧನ್ಯವಾದ ಸಲ್ಲಿಸಲು ಶ್ರೀಗಳ ಕ್ಷೇತ್ರಗಳಿಗೆ ಸಂದರ್ಶಿಸಿದ್ದಾರೆಯೇ ? ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ. ಒಟ್ಟಾರೆ ಶ್ರೀಗಳ ದಕ್ಷಿಣ ಕನ್ನಡ ಭೇಟಿ ಯಶಸ್ಸಿಗಾಗಿ ಪೂರ್ಣಗೊಳ್ಳಲಿದೆ.

Leave a Response