Recent Posts

Sunday, January 19, 2025
ಸುದ್ದಿ

ಯಶಸ್ ಸಂಸ್ಥೆಯಿಂದ ಭಗವದ್ಗೀತಾ ಅಧ್ಯಯನ ತರಗತಿ ಆರಂಭ – ಕಹಳೆ ನ್ಯೂಸ್

ಪುತ್ತೂರು: ಭಗವದ್ಗೀತೆ ಹಾಗು ಅದರ ಸಂದೇಶ ನಮಗೆ ದೊರಕಿರುವ ಅತ್ಯಮೂಲ್ಯ ಸಂಪತ್ತು. ಭಯದಿಂದ, ಆತಂಕಗಳಿಂದ ಕುಡಿದ ಕಲ್ಪನಾ ಲೊಕದಲ್ಲಿರುವ ಸಕಲ ಜೀವಿಗಳ ವಿಕಾಸಕ್ಕಾಗಿ ಭಗವದ್ಗೀತೆ ಸಹಕಾರಿ. ಅ ಕಾರಣದಿಂದ ಭಗವದ್ಗೀತೆ ಒಂದು ಜೀವನ ಗ್ರಂಥ ಎಂದು ಧಾರ್ಮಿಕ ಪ್ರವಚನಾಕಾರ ಕೇಶವ ಭಟ್ ಕೇಕಣಾಜೆ ಹೇಳಿದರು.

ಅವರು ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರವರ್ತಿತ ವಿವೇಕಾನಂದ ಅಧ್ಯಯನ ಕೇಂದ್ರ – ಯಸಸ್ ಇದರ ವತಿಯಿಂದ ಆಯೋಜಿಸಲಾದ ಗೀತೋಪದೇಶ- ಭಗವದ್ಗೀತಾ ಅಧ್ಯಯನ ತರಗತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಶನಿವಾರ ಮತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಕಾರ್ಯವಾಹ ನ.ಸೀತಾರಾಮ ಮನುಕುಲದ ಉತ್ಥಾನಕ್ಕಾಗಿ ಭಗವದ್ಗೀತಾ ಅವರು ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜವಬ್ದಾರಿಯನ್ನು ಸಶಕ್ತವಾಗಿ ಪೂರ್ಣಗೊಳಿಸಲು ಭಗವದ್ಗೀತೆ ಪ್ರೇರೇಪಿಸುತ್ತದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿವೇಕಾನಂದ ವಿದ್ಯವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಮ್ .ಕೃಷ್ಣ ಭಟ್ ಮಾತನಾಡಿ ಜೀವನದಲ್ಲಿ ಕವಲುದಾರಿ ಎಂಬ ಸಂದಿಗ್ಧತೆ ಪ್ರತಿಯೊಬ್ಬರಿಗೂ ಎದುರಾಗುತ್ತದೆ. ಇಂತಹ ಸಂದರ್ಭದಲ್ಲಿ ಸರಿಯಾದ ಮಾರ್ಗದರ್ಶನವ್ಯಕ್ತಿಗೆ ದೊರಕಬೇಕು. ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುವ ಶಕ್ತಿ ಭಗವದ್ಗೀತೆಗೆ ಇದೆ. ಅಂತಹ ಪವಿತ್ರ ಭಗವದ್ಗೀತೆಯನ್ನು ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ನುಡಿದರು.

ಕಾರ್ಯಕ್ರಮವನ್ನು ಯಶಸ್ಸ್ ಸಂಯೋಜಕ ಗೋವಿಂದರಾಜ ಶರ್ಮ ಸ್ವಾಗತಿಸಿ, ಯಶಸ್ ಉಪನ್ಯಾಸಕ ಪ್ರಮೋದ್ ವಂದಿಸಿದರು. ಯಶಸ್ಸ್‍ನ ಕಾರ್ಯದರ್ಶಿ ಮುರಳಿಕೃಷ್ಣ ಕೆ.ಎನ್ ಪ್ರಸ್ಥಾವಿಸಿದರು. ಸಂಸ್ಕøತ ಅಧ್ಯಾಪಕ ವಿಘ್ನೇಶ್ ವಿದ್ಯಾರ್ಥಿಗಳಿಗೆ ಗೀತೊಪದೇಶದ ಸಂಕಲ್ಪವನ್ನು ಭೋದಿಸಿದರು. ಯಶಸ್ಸ್‍ನ ಆಡಳಿತ ಮಂಡಳಿಯ ಸದಸ್ಯರು,ಉಪನ್ಯಾಸಕರು ಹಾಗು ಇತರ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ವವಿಜಯಸರಸ್ವತಿ ನಿರ್ವಹಿಸಿದರು.