Sunday, January 19, 2025
ಸುದ್ದಿ

ಕಳಾರ- ತಿಮರಡ್ಕ- ಅಡ್ಕಾಡಿ ಸಂಪರ್ಕ ರಸ್ತೆ ಉದ್ಘಾಟನೆ – ಕಹಳೆ ನ್ಯೂಸ್

ಕಡಬ: ಕಡಬ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳಾರ ತಿಮರಡ್ಕ, ಅಡ್ಕಾಡಿ ಸಂಪರ್ಕ ರಸ್ತೆಯನ್ನು ಜಿ. ಪಂ ಸದಸ್ಯ ಪಿ ಪಿ ವರ್ಗೀಸ್ ಉದ್ಘಾಟಿಸಿದರು.

ನಂತರ ಮಾತನಾಡಿದ ವಗೀಸ್ ಕಡಬ ೧ನೇ ವಾರ್ಡಿಗೆ ಸೇರಿದ ಈ ರಸ್ತೆ ಶಿಥಿಲಗೊಂಡು ಮಳೆಗಾಲದಲ್ಲಿ ಈ ಭಾಗದ ಜನರು ಬಹಳ ತೊಂದರೆ ಅನುಭವಿಸುತ್ತಿದ್ದರು. ಈ ಬಗ್ಗೆ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿ ಯೋಗ್ಯ ರಸ್ತೆ ನಿರ್ಮಾಣ ಮಾಡಿದ್ದೆವೆ. ಮುಂದೆಯೂ ಉಳಿದ ರಸ್ತೆಗೆ ಕಾಮಕ್ರಿಟಿಕರಣ ಮಾಡಲು ಪ್ರಯತ್ನಿಸುತ್ತೆನೆಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಮುಖ್ಯ ಅತಿಥಿಯಾಗಿ ಕಡಬದ ತಹಶೀಲ್‌ದಾರ ಜಾನ್ ಪ್ರಕಾಸ್ ರೊಡ್ರಿಗಸ್ ಜನಪ್ರತಿನಿಧಿಗಳ ಕಾಳಜಿಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ವೇಳೆ ಕಂದಾಯ ನೀರಿಕ್ಷಕ ರಂಜನ್, ಪಂಚಾಯತ್‌ರಾಜ್ ಇಂಜಿನಿಯರ್ ಭರತ್, ಕಳಾರ ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಮತ್ತಿತ್ತರರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು