Saturday, November 23, 2024
ಸುದ್ದಿ

Breaking News : ನಿಮ್ಮ ಜೀವ ತೆಗೆಯುತ್ತೇವೆ ಹುಷಾರ್….! ; ಕೇಂದ್ರ ಸಚಿವ ಅನಂತಕುಮಾರ್​ ಹೆಗಡೆಗೆ ಜೀವ ಬೆದರಿಕೆ ಕರೆ – ಕಹಳೆ ನ್ಯೂಸ್

ಶಿರಸಿ (ಫೆ.18): ಬಿಜೆಪಿ ಸಂಸದ ಹಾಗೂ ಕೇಂದ್ರ ಸಚಿವ ಅನಂತ​ಕುಮಾರ್​ ಹೆಗಡೆ ಅವರಿಗೆ ಈ ಮೊದಲು ಸಾಕಷ್ಟು ಬಾರಿ ಜೀವ ಬೆದರಿಕೆ ಕರೆಗಳು ಬಂದಿದ್ದವು. ಈಗ ಮತ್ತದೇ ಘಟನೆ ಪುನರಾವರ್ತನೆಗೊಂಡಿದೆ. ಅವರ ಮನೆಗೆ ನಿನ್ನೆ ತಡರಾತ್ರಿ ಜೀವ ಬೆದರಿಕೆ ಕರೆ ಬಂದಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ.

ತಡರಾತ್ರಿ 1.45ರ ಸುಮಾರಿಗೆ ಹೆಗಡೆ ಅವರ ಮನೆಯ ಲ್ಯಾಂಡ್​ಲೈನ್​ಗೆ ದೂರವಾಣಿ ಕರೆ ಬಂದಿದೆ. ಆದರೆ, ಅವರು ಮನೆಯಲ್ಲಿರಲಿಲ್ಲ. ಹಾಗಾಗಿ, ಅವರ ಪತ್ನಿ ರೂಪಾ ಹೆಗಡೆ ಕರೆ ಸ್ವೀಕರಿಸಿ ಮಾತನಾಡಿದ್ದಾರೆ. ಈ ವೇಳೆ ಕರೆ ಮಾಡಿದ ಅನಾಮಿಕರು ಅವಾಚ್ಯ ಶಬ್ದಗಳಿಂದ ಅವರಿಗೆ ಬಯ್ಯಲು ಆರಂಭಿಸಿದ್ದ. ಅಷ್ಟೇ ಅಲ್ಲ, ಜೀವ ಬೆದರಿಕೆಯನ್ನು ಒಡ್ಡಿದ್ದ.

ಜಾಹೀರಾತು
ಜಾಹೀರಾತು
ಜಾಹೀರಾತು

“ನಿಮ್ಮ ಪಾಡಿಗೆ ನಿಮ್ಮ ಕೆಲಸ ಮಾಡಿಕೊಂಡು ಇರಬೇಕು. ಮುಸ್ಲಿಮರ ಬಗ್ಗೆ ಮಾತನಾಡಿದರೆ ನಿಮ್ಮನ್ನು, ನಿಮ್ಮ ಕುಟುಂಬವನ್ನು ಬಿಡುವದಿಲ್ಲ. ಜೀವ ತೆಗಯುತ್ತೇವೆ. ಅಯೋಧ್ಯೆ ನಿಮಗೆ ಬೇಕಾ? ಅದನ್ನು ಬಿಡುವುದಿಲ್ಲ. ನಿಮ್ಮ ಜೀವ ತೆಗೆಯುತ್ತೇವೆ,” ಎಂದು ದೂರವಾಣಿ ಕರೆ ಮಾಡಿದ ಅನಾಮಿಕ ಬೆದರಿಕೆ ವೊಡ್ಡಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕರೆ ಮಾಡಿದವರು ಅವಾಚ್ಯ ಶಬ್ದಗಳಿಂದ ಬಯ್ಯಲು ಆರಂಭಿಸಿದಾಗ ರೂಪಾ ಅವರು ಕಾಲ್​ ಕಟ್​ ಮಾಡಿದ್ದಾರೆ. ಆದಾಗ್ಯೂ, ಪದೇ ಪದೆ ಕರೆಗಳು ಬರುತ್ತಿದ್ದವು ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರ ಆಪ್ತ ಸಹಾಯಕ ಸುರೇಶ್​ ಶೆಟ್ಟಿ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅನಂತ್​ ಕುಮಾರ್​ ಹೆಗಡೆ ಅವರು ಈ ಮೊದಲಿನಿಂದಲೂ ಹಿಂದುಗಳ ಧ್ವನಿ ಎತ್ತುತ್ತಾ ಬಂದಿದ್ದಾರೆ. ಆರ್​ಎಸ್​ಎಸ್​ ಹಿನ್ನೆಲೆ ಹೊಂದಿರುವ ಅವರು, ಪಕ್ಕಾ ಹಿಂದು ವಾದಿ. ಕಳೆದ ವರ್ಷ ಅವರ ಬೆಂಗಾಲು ವಾಹನಕ್ಕೆ ಲಾರಿಯೊಂದು ಡಿಕ್ಕಿ ಹೊಡೆದಿತ್ತು. ಇದು ಕೊಲೆ ಯತ್ನ ಎಂದು ಹೆಗಡೆ ಆರೋಪಿಸಿದ್ದರು. ಈ ಮೊದಲು ಕೂಡ ಅವರಿಗೆ ಸಾಕಷ್ಟು ಬೆದರಿಕೆ ಕರೆಗಳು ಬಂದಿವೆ.