Monday, January 20, 2025
ಕ್ರೀಡೆಸುದ್ದಿ

ಸ್ಪೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ವಿಶ್ವ ಕಪ್ ಬಳಿಕ ಕ್ರಿಕೆಟ್ ನಿಂದ ನಿವೃತ್ತಿ ಘೋಷಣೆ – ಕಹಳೆ ನ್ಯೂಸ್

ವೆಸ್ಟ್ ಇಂಡೀಸ್ ನ ಸ್ಪೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ. ಮುಂಬರುವ ವಿಶ್ವ ಕಪ್ ಬಳಿಕ ಏಕದಿನ ಕ್ರಿಕೆಟ್ ನಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದಾರೆ.

ಏಕ ದಿನ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಸಾಧನೆಗೆ ಕ್ರಿಸ್ ಗೇಯ್ಲ್ ಕೇವಲ 273 ರನ್ ಗಳ ಹಿಂದಿದ್ದು, ಈವರಗೆ 284 ಏಕ ದಿನಗಳ ಪಂದ್ಯಗಳಿಂದ ಕ್ರಿಸ್ ಗೇಯ್ಲ್ 37.12 ಸರಾಸರಿಯೊಂದಿಗೆ 9727 ರನ್ ಗಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾನುವಾರದಂದು ಕ್ರಿಸ್ ಗೇಯ್ಲ್ ಈ ಘೋಷಣೆ ಮಾಡಿದ್ದು, ವಿಂಡೀಸ್ ಕ್ರಿಕೆಟ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಇದನ್ನು ಪ್ರಕಟಿಸಿದೆ. ಏಕ ದಿನ ಹೊರತುಪಡಿಸಿ ಕ್ರಿಸ್ ಗೇಯ್ಲ್ 103 ಟೆಸ್ಟ್ ಹಾಗೂ 56 ಟಿ20 ಪಂದ್ಯಗಳನ್ನಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು